ಡಿಕೆಶಿ CM ಆಗಲಿ 1001 ತೆಂಗಿನಕಾಯಿ ಒಡೆದ JDS-BJP ಮುಖಂಡರು!


ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡಿಗೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಾದ ರಾಜು, ವೇಣು ಮತ್ತು ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರು ತೆಂಗಿನಕಾಯಿ ಒಡೆಯುವ ಕಾರ್ಯವನ್ನ ಮಾಡಿದ್ದಾರೆ. ಕಾರ್ಯಕರ್ತರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹರಿಕೆ ಹೊತ್ತು 1001 ತೆಂಗಿನಕಾಯಿಗಳನ್ನು ಒಡೆದು ದೇವಿಗೆ ಅರ್ಪಿಸಿದರು. ಇದರಲ್ಲಿ ಮಕ್ಕಳು ಸಹ ಭಾಗಿಯಾಗಿದ್ದರು. ಈ ಮೂಲಕ ಅವರು ಡಿಕೆಶಿ ವಿರುದ್ಧ ಜನರ ಬೆಂಬಲವನ್ನು ಮತ್ತು ಅವರ ಸಿಎಂ ಸ್ಥಾನಕ್ಕಾಗಿ ಆಶಾಭಾವವನ್ನು ವ್ಯಕ್ತಪಡಿಸಿದರು.

ವರದಿ : ಲಾವಣ್ಯ ಅನಿಗೋಳ

About The Author