ಕರೆಂಟ್ ಶಾಕ್ ಹೊಡೆದು ಯುವತಿ ಸಾವು: ಸಿಸಿ ಕ್ಯಾಮೆರಾದಲ್ಲಿ ದಾರುಣ ದೃಶ್ಯ ಸೆರೆ!

ಕರೆಂಟ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದಿದ್ದು, ಆ ದಾರುಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 23 ವರ್ಷದ ಯುವತಿ ಮೇಘನಾ ನೀರಿನ ಮೋಟರ್ ಆಫ್ ಮಾಡಲು ಹೋದಾಗ ದಿಢೀರ್‌ ಆಗಿ ಕರೆಂಟ್ ಶಾಕ್ ಹೊಡೆದು ಮೇಘನಾ ಚೀರಾಡಿದ್ದಾಳೆ. ಕರೆಂಟ್ ಶಾಕ್ ನಿಂದ ಕೋಮಾಗೆ ಹೋಗಿದ್ದ ಮೇಘನಾ, ಕಳೆದ 35 ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ಸಾವು- ಬದುಕಿನ‌‌ ನಡುವೆ ಹೋರಾಡುತ್ತಿದ್ದಳು. ಆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ದುರಂತದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author