9ನೇ ವರ್ಷದ ಪಾದಯಾತ್ರೆಹೋರಾಟ ಮಾಜಿ ಶಾಸಕ ಅಮೃತ ದೇಸಾಯಿ

ಧಾರವಾಡ: ಕಾರ್ತಿಕ ಮಾಸದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಉಳವಿಗೆ ಪಾದಯಾತ್ರೆ ಆರಂಭಿಸಿದ ಮಾಜಿ ಶಾಸಕ ಅಮೃತ ದೇಸಾಯಿ, ನಿರಂತರವಾಗಿ 9ನೇ ವರ್ಷದ ಪಾದಯಾತ್ರೆಗೆ ಇಂದು ಚಾಲನೆ ನೀಡಲಾಗಿದೆ.

ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ಮಠದಿಂದ ಪಾದಯಾತ್ರೆ ಪ್ರಾರಂಭಗೊಂಡಿದ್ದು, ಮಡಿವಾಳೇಶ್ವರ ಮಠದ ಆತ್ಮಾರಾಮ ಸ್ವಾಮೀಜಿ, ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹರಿಹರ ಪೀಠದ ವಚನಾನಂದ ಸ್ವಾಮೀಜಿಗಳು ಧಾರ್ಮಿಕ ಪೂಜೆ ನೆರವೇರಿಸಿ ಯಾತ್ರೆಗೆ ಚಾಲನೆ ನೀಡಿದರು.

ಮೂರು ದಿನಗಳ ಕಾಲ ನಡೆಯಲಿರುವ ಈ ಪಾದಯಾತ್ರೆ ಇಂದು ಮೊದಲ ದಿನ ನಿಗದಿ ಗ್ರಾಮಕ್ಕೆ ತಲುಪಲಿದೆ. ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಅಂತಿಮವಾಗಿ ಉಳವಿಗೆ ಯಾತ್ರೆಯು ಮುಗಿಯಲಿದೆ.

ಅಮೃತ ದೇಸಾಯಿ ಅವರ ಈ ಕಾರ್ತಿಕ ಪಾದಯಾತ್ರೆ ಕಳೆದ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು, ಭಕ್ತಾಧಿಗಳಲ್ಲೂ ವಿಶೇಷ ಕುತೂಹಲವನ್ನು ಹುಟ್ಟುಹಾಕಿದೆ.

 

 

About The Author