ಗದಗ ನಗರದ ಮುಳಗುಂದ ನಾಕಾದಲ್ಲಿರುವ ದುರ್ಗಾ ಬಾರ್ ಎದುರಿಗೆ ಯುವಕನ ಮೇಲೆ ಚಾಕು ಇರಿಯಲಾಗಿದೆ. ಸ್ಥಳೀಯರು ಈ ಭಯಾನಕ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆ ಹಿಡಿಡಿದ್ದಾರೆ. ಯಾರ ಭಯವಿಲ್ಲದೇ ನಗರದಲ್ಲಿ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಮುಷ್ತಾಕ ಹುಸೇನಸಾಬ್ ಮೂಲಿಮನಿ(24) ಅಭಿಷೇಕ್ ಚಂದ್ರಕಾಂತ ಹರ್ಲಾಪುರ(20) ಸಾಹಿಲ್ ಹುಸೇನಸಾಬ್ ಹಣಗಿ (20) ಗಲಾಟೆ ಮಾಡಿಕೊಂಡಿದ್ದಾರೆ.
ಕಿಲ್ಲಾ ಓಣಿ ಹಾಗೂ ಒಕ್ಕಲಿಗರ ಓಣಿ ಯುವಕ ನಡುವೆ ಗಲಾಟೆ ನಡೆದಿದೆ. ಯುವಕರು ಅರುಣ ಕೊಟ್ನೇಕಲ್ (28) ಗಾಯಗೊಂಡ ಗಾಯಾಳು ಯುವಕನನ್ನ ಗದಗ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಸ್ಥಳಕ್ಕೆ ಗದಗ ಶಹರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಮೂವರಿಂದ ನಡುರಸ್ತೆಯಲ್ಲಿ ನೂರಾರು ಜನ್ರ ಎದುರಲ್ಲೇ ತಲ್ವಾರ್, ಚಾಕು, ಬೀಯರ್ ಬಾಟಲನಿಂದ್ ಮನಸ್ಸೋ ಇಚ್ಛೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕತ್ತು, ಮುಖ, ತಲೆ, ಹೊಟ್ಟೆ, ಎದೆ, ಕೈ ಸೇರಿ ದೇಹದ ಹಲವು ಭಾಗದಲ್ಲಿ ಚಾಕು ಇರಿದಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಯಾವುದೇ ಭಯವಿಲ್ಲದೇ ಇಂತಹ ಕೃತ್ಯ ಎಸಗಿದ್ದಾರೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ರಕ್ತಸಿಕ್ತವಾಗಿರುವುದನ್ನ ನೋಡಿದ ಗದಗ-ಬೆಟಗೇರಿ ಅವಳಿ ನಗರದ ಜನರು ಬೆಚ್ಚಿಬಿದ್ದಿದ್ದಾರೆ. ಇನ್ನು ಮಗನ ಮೇಲೆ ಹಲ್ಲೆ ಸುದ್ದಿ ಕೇಳಿ ಗಾಯಾಳುವಿನ ತಾಯಿ ಆಸ್ಪತ್ರೆಗೆ ದೌಡಯಿಸಿದ್ದಾರೆ. ಮಗನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ.




