ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಕ್ಕರವಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆಗೆ ಯತ್ನಿಸಿದ ನಾಲ್ವರಲ್ಲಿ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಗೆ ಬಿದ್ದಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಅರಣ್ಯ ಸಿಬ್ಬಂದಿಗಳು ಗಸ್ತು ಹೊಡೆಯುತ್ತಿದ್ದ ವೇಳೆ, ಶಂಕಾಸ್ಪದವಾಗಿ ಅರಣ್ಯ ಪ್ರದೇಶದೊಳಗೆ ಅಡಗಿ ಬೇಟೆಗೆ ಸಿದ್ಧತೆ ನಡೆಸುತ್ತಿದ್ದ ನಾಲ್ವರನ್ನು ಪತ್ತೆ ಮಾಡಿದ್ದಾರೆ. ತಕ್ಷಣ ಬಂಧಿಸಲು ಮುಂದಾದಾಗ ಒಬ್ಬ ಆರೋಪಿಯು ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ.
ಶಫೀವುಲ್ಲಾ, ಜಾವಾದ್ ಆಫ್ರನ್, ಫೈಸಲ್ ಹುಸೇನ್ ಬಂಧಿತ ವ್ಯಕ್ತಿಗಳಾಗಿದ್ದಾರೆ. ನಾಲ್ವರ ತಂಡವು ಶಿರಾಳಕೊಪ್ಪ ಪ್ರದೇಶದಿಂದ ಅರಣ್ಯಕ್ಕೆ ಬೇಟೆಗೆ ಬಂದಿದ್ದರೆಂದು ಅರಣ್ಯ ಇಲಾಖೆ ತಿಳಿಸಿದೆ.
ಬಂಧಿತರ ವಶದಿಂದ ಬೇಟೆಗೆ ಬಳಸಿದ್ದ ಗನ್, ಅದರ ಕಾರ್ಟ್ರಿಜ್ಗಳು, ಹಾಗೂ ಪ್ರಯಾಣಕ್ಕೆ ಬಳಸಿದ್ದ ಕಾರುವನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾದ ಆರೋಪಿ ಶೋಧ ಕಾರ್ಯವೂ ಮುಂದುವರಿದಿದೆ.
ವರದಿ : ಲಾವಣ್ಯ ಅನಿಗೋಳ




