Mandya News: ಮಂಡ್ಯ: ಜೆಡಿಎಸ್ ಮುಖಂಡರಾದ ಡಾಲು ರವಿ ಬಿ.ಎಂ.ಕಿರಣ್ ನೇತೃತ್ವದಲ್ಲಿ ಇಂದು ಮಂಡ್ಯದಲ್ಲಿ ಪ್ರೆಸ್‌ಮೀಟ್ ನಡೆದಿದ್ದು, ಶಾಸಕ ಮಂಜು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ಪಟ್ಟಣ ಪುರಸಭೆ ಚುನಾವಣೆ ವೇಳೆ ಬಹುಮತ ಇದ್ರು ತಮ್ಮ ಅಧಿಕಾರ ದಾಹಕ್ಕೆ ಪುರಸಭೆ ಅಧಿಕಾರ ಬಿಟ್ಟು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಇದೀಗ ಕ್ಷೇತ್ರದಲ್ಲಿ ನಮ್ಮ ರಾಜಕೀಯ ಬೆಳವಣಿಗೆ ನೋಡಿ ನಮ್ಮನ್ನು ತುಳಿಯುತ್ತಿದ್ದಾರೆ. ಶಾಸಕರ ಈ ವರ್ತನೆಯಿಂದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಗಿದೆ. ನಾವುಗಳು ಪಕ್ಷ ಬಿಟ್ಟಿಲ್ಲ ಪಕ್ಷ ದ್ರೋಹ, ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ನಮ್ಮ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡಿ ತಮ್ಮ ಬೆಂಬಲಿಗರನ್ನು ಎತ್ತಿಕಟ್ಟಿದ್ದಾರೆ. ನಮ್ಮನ್ನು ಪಕ್ಷದ ನಾಯಕರು ಉಚ್ಚಾಟನೆ ಮಾಡಲಿ ಬೇಕಿದ್ರೆ ಉಚ್ಚಾಟನೆ ಮಾಡುವಂತೆ ಶಿಪಾರಸ್ಸು ಮಾಡಲು ಇವರ್ಯಾರು..? ಎಂದು ಪ್ರಶ್ನಿಸಿದ್ದಾರೆ.
ನಾವು ವ್ಯಕ್ತಿ ಪೂಜೆ ಮಾಡಲ್ಲ ಪಕ್ಷ ಪೂಜೆ ಮಾಡ್ತಿವಿ, ನಾವು ಶಾಸಕರ ಪಕ್ಷಕ್ಕೆ ಬಂದಿಲ್ಲ. ಜೆಡಿಎಸ್ ಪಕ್ಷಕ್ಕೆ ಈಗಲೂ ನಾವು ಕಾರ್ಯಕರ್ತರೇ ಪಕ್ಷದ ಕಾರ್ಯಕ್ರಮಕ್ಕೆ ಹೋಗ್ತಿವಿ. ನಮಗೆ ಕುಮಾರಸ್ವಾಮಿ ದೇವೇಗೌಡ , ನಿಖಿಲ್ ನಾಯಕರು. ನಾವು ಈಗಲೂ ಪಕ್ಷ ಬಿಟ್ಟಿಲ್ಲ. ನಾನು ಪಕ್ಷ ಬಿಟ್ಟರೆ ಬಹಿರಂಗವಾಗೇ ಹೇಳಿ ಪಕ್ಷ ಬಿಡ್ತೀನಿ. ಪಕ್ಷದ ವರಿಷ್ಠರು ಕಾರ್ಯಕರ್ತರೇ ಆಸ್ತಿ ಎಂದಿದ್ದಾರೆ. ಶಾಸಕರು ಶಾಸಕರಾಗಿ ಕೆಲಸ ಮಾಡಲಿ ಎಂದು ಆ ಸ್ಥಾನಕ್ಕೆ ಬೆಲೆ ಕೊಡ್ತಿವಿ ಎಂದು ಬಂಡಾಯ ನಾಯಕರು ಹೇಳಿದ್ದಾರೆ.

