Spiritual: ಅಹಂಕಾರ ಅಂದರೇನೇ ಕೆಂಡವಿದ್ದಂತೆ. ಅದು ನಿಮ್ಮನ್ನೇ ಬೂದಿ ಮಾಡಿಬಿಡುತ್ತದೆ. ಹಾಗಾಗಿ ಯಾವುದೇ ವಿಷಯದಲ್ಲೂ ಅಹಂಕಾರ ಪಡಬಾರದು ಅಂತಾರೆ ಹಿರಿಯರು.
ಸಂಬಂಧದಲ್ಲಿ ಅಹಂಕಾರ: ಸಂಬಂಧಗಳು ಹಾಳಾಗೋದು ಅಲ್ಲಿ ಅಹಂಕಾರ ಬಂದಾಗ ಮಾತ್ರ. ಪತಿ-ಪತ್ನಿ ನಡುವಿನ ಸಂಬಂಧ ಹಾಳಾಗೋದು, ಪತಿಗೆ ತನ್ನ ಅಪ್ಪ-ಅಮ್ಮನ ಮೇಲೆ ಪ್ರೀತಿ, ಕಾಳಜಿಗಿಂತ ಹೆಚ್ಚು, ಅವರು ನನ್ನವರು, ನೀನು ಈಗ ಬಂದವಳು ಅನ್ನೋ ಅಹಂಕಾರವಿದ್ದಾಗ. ಇದೇ ರೀತಿ ಎಲ್ಲ ಸಂಬಂಧಗಳು ಅಹಂಕಾರದ ಕಾರಣಕ್ಕಾಗಿಯೇ ಹಾಳಾಗೋದು.
ಶ್ರೀಮಂತಿಕೆಯ ಅಹಂಕಾರ: ಯಾರಿಗೆ ಶ್ರೀಮಂತಿಕೆಯ ಅಹಂಕಾರವಿರುತ್ತದೆಯೋ, ಅಂಥವರ ಅಹಂಕಾರವನ್ನು ದೇವರು 1 ದಿನ ಇಳಿಸಿಬಿಡುತ್ತಾನೆ. ಇಂಥ ಹಲವು ಉದಾಹರಣೆಗಳನ್ನು ನಾವು ನೋಡಿರುತ್ತೇವೆ. ಏಕೆಂದರೆ, ತಾನು ಬೆವರು ಸುರಿಸಿ ದುಡಿದ ಹಣ ನೋಡಿ, ಶ್ರೀಮಂತಿಕೆ ಪಡೆದ ವ್ಯಕ್ತಿಗೆ ಎಂದಿಗೂ ಅಹಂಕಾರವಿರುವುದಿಲ್ಲ. ಆದರೆ ಬೇರೆಯವರ ದುಡ್ಡಿನಲ್ಲಿ ಶ್ರೀಮಂತಿಕೆ ಪಡೆದವನಿಗೆ ಅಹಂಕಾರ ತುಂಬಿ ತುಳುಕುತ್ತದೆ. ಮತ್ತು ಅದೇ ಅಹಾಂಕರ ಅವನ ಶ್ರೀಮಂತಿಕೆ ಕರಗುವಂತೆ ಮಾಡುತ್ತದೆ.
ವಿದ್ಯೆ ಇದೆ ಎಂಬ ಅಹಂಕಾರ: ವಿದ್ಯೆ ಇರುವವರಿಗೆ ಎಂದಿಗೂ ಅಹಂಕಾರವಿರಬಾರದು. ಏಕೆಂದರೆ, ವಿದ್ಯೆ, ಜ್ಞಾನದ ಬಗ್ಗೆ ಅಹಂಕಾರ ಇರುವವನು ಇತರರ ಕೆಲಸವನ್ನು ಸಾಮಾನ್ಯವೆಂದು ಭಾವಿಸುತ್ತಾನೆ. ಇದರಿಂದಲೇ ಅವನ ವಿದ್ಯೆ, ಜ್ಞಾನಕ್ಕೆ ಬೆಲೆ ಸಿಗದಂತಾಗುತ್ತದೆ. ಇದಕ್ಕೆ ಉದಾಹರಣೆ ರಾವಣ. ರಾವಣ ಶಸ್ತ್ರ-ಶಾಸ್ತ್ರ ಎರಡರಲ್ಲೂ ಪರಿಣಿತಿ ಸಾಧಿಸಿದ್ದ. ಆದರೆ ಅವನ ವಿದ್ಯೆ ಅವನ ಜೀವವನ್ನು ಕಾಪಾಡಲಾಗಲಿಲ್ಲ. ಕಾರಣ ಅವನಿಗಿದ್ದ ಅಹಂಕಾರ.
ಸೌಂದರ್ಯದ ಬಗ್ಗೆ ಅಹಂಕಾರ: ಸೌಂದರ್ಯದ ಬಗ್ಗೆ ಹಲವರಿಗೆ ಅಹಂಕಾರವಿರುತ್ತದೆ. ಆದರೆ ಸೌಂದರ್ಯ ಅನ್ನೋದು ತಾತ್ಕಾಲಿಕ. ಅದರ ಬಗ್ಗೆ ಅತೀಯಾದ ಅಹಂಕಾರವಿರುವವರು ಕುರೂಪಿಯಾಗಿ ಮೂಲೆ ಸೇರಿರುವ ಉದಾಹರಣೆ ಇದೆ. ಹಾಗಾಗಿ ಸೌಂದರ್ಯದ ಬಗ್ಗೆ ಅಹಂಕಾರ ಬೇಡ.

