Friday, November 28, 2025

Latest Posts

Tumakuru News: ಡಿಕೆಶಿ ಅಭಿಮಾನಿಗಳ ಸಂಕಲ್ಪವನ್ನು ನಾನು ಈಡೇರಿಸಿದ್ದೇನೆ: ಶಾಸಕ ರಂಗನಾಥ್

- Advertisement -

Tumakuru News: ತುಮಕೂರು: ತುಮಕೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಅಂತಾ ಶತ್ರು ಸಂಹಾರ ಯಾಗ ಮಾಡಿಸಿರುವ ಕಾಂಗ್ರೆಸ್ ಶಾಸಕ ರಂಗನಾಥ್ ಬಳಿಕ ಮಾಧ್ಯಮದ ಜತೆ ಮಾತನಾಡಿದ್ದಾರೆ.

ಕುಣಿಗಲ್ ತಾಲ್ಲೂಕಿನ ಜನ ಎಡೆಯೂರು ಸಿದ್ಧಲಿಂಗೇಶ್ವರನಲ್ಲಿ ಸಂಕಲ್ಪ ಮಾಡಿಕೊಂಡಿದ್ದಾರೆ. ಅದಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ನಾಡಿನ ಜನತೆಗೆ ಕರ್ನಾಟಕ ಜನತೆಗೆ ಒಳ್ಳೆದಾಗಲಿ ಮುಖ್ಯಮಂತ್ರಿಗಳಿಗೆ ಆಶಿರ್ವಾದ ಮಾಡಲಿ,
ಉಪ ಮುಖ್ಯಮಂತ್ರಿಗಳಿಗೆ ಆಶಿರ್ವಾದ ಮಾಡಲಿ ಎಂದು ವಿಶೇಷ ಪೂಜೆ ಯಾಗವನ್ನ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಇಷ್ಟಾರ್ಥಗಳನ್ನ ಸಿದ್ದಿಸಲಿ ಎಂದು ಯಾಗವನ್ನ‌ ಮಾಡಿದ್ದಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ಹೋಮ ಹವನ ಮಾಡಿದ್ದಾರೆಂದು ನಾನು ಹೇಳುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಸಂಬಂಧಿಸಿದಂತೆ ಮಾತನಾಡಬಾರದು ಎಂದು ಹೈಕಮಾಂಡ್ ಸೂಚಿಸಿದೆ ಎಂದು ರಂಗನಾಥ್ ಹೇಳಿದ್ದಾರೆ.

ನಾನು ಅದರ ಬಗ್ಗೆ ಮಾತನಾಡಲ್ಲ. ಡಿಕೆ ಶಿವಕುಮಾರ್ ಅವರ ಅಭಿಮಾನಿಗಳು, ಡಿಕೆಶಿ ಅವರು ಭಕ್ತಾದಿಗಳು, ಹಿತೈಷಿಗಳು ಅವರ ಇಷ್ಟಾರ್ಥಗಳು ಈಡೇರಿಸಲು ಎಂದು ಹರಕೆ ಹೊತ್ತುಕೊಂಡಿರೋದು ಅವರ ವಯಕ್ತಿಕ. ನಿಮಗೆಲ್ಲಾ ಒಂದು ದಿನ ಸಿಹಿ ಸುದ್ದಿ ಕುರಿತು ಸುದ್ದಿಗೊಷ್ಠಿ ನಡೆಸಿ ಹೇಳುತ್ತೇನೆ. ಕರ್ನಾಟಕ ರಾಜ್ಯದ 7 ಕೋಟಿ ಜನರಿಗೂ ಸಿಹಿ ಸುದ್ದಿ ಸಿಗುತ್ತದೆ‌. ಸೂಕ್ತ ಸಮಯದಲ್ಲಿ ಸೂಕ್ತವಾದ ನಿರ್ಧಾರವನ್ನ ಹೈಕಮಾಂಡ್ ಕೈಗೊಳ್ಳುತ್ತೆ.
ನಾವೆಲ್ಲಾ ಮನುಷ್ಯರು ಮಾತಿಗೆ ಬದ್ದವಾಗಿರೋದು ಮುಖ್ಯ, ನಾವು ಮಾತನಾಡಿದಂತೆ ನಡೆದುಕೊಳ್ಳುವುದು ಇತಿಹಾಸವಾಗಿ ಉಳಿಯುತ್ತದೆ ಎಂದು ರಂಗನಾಥ್ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಕ್ಕಿಂತ ಮುಂಚೆ ಕೊಟ್ಟ ಭರವಸೆಗಳನ್ನ ಈಡೆರಿಸಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟಂತಹ ಬಹಳಷ್ಟು ಮಾತುಗಳನ್ನ ಈಡೆರೆಸುತ್ತಾರೆ ಎಂಬ ನಂಬಿಕೆ ಇಡೀ ಕರ್ನಾಟಕ ಜನರಿಗೆ ಇದೆ. ಕೊಟ್ಟ ಮಾತನ್ನ ಉಳಿಸಿಕೊಳ್ಳೋದು ಸಿದ್ದರಾಮಯ್ಯನವರ ವ್ಯಕ್ತಿತ್ವ. ಏನೇನು ಭರವಸೆ ಕೊಟ್ಟಿದ್ದಾರೆ ಅದನ್ನ ಈಡೆರೆಸುತ್ತಾರೆ ಅನ್ನೋ ಭರವಸೆ ಇದೆ. ಸಿಎಂ ಸಿದ್ದರಾಮಯ್ಯ ನವರು ಕಾಂಗ್ರೆಸ್ ನಲ್ಲಿ ಮೇರು ಪರ್ವತ ಅವರು ನಮ್ಮನ್ನ ರಕ್ಷಣೆ ಮಾಡ್ತಾರೆ. ಅವರು ಏನ್ ಮಾತು ಕೊಟ್ಟಿದ್ದಾರೆ ಅದನ್ನ ನಡೆದುಕೊಳ್ತಾರೆ ಅನ್ನೋದು, ನಾನೊಬ್ಬನೆ ಅಲ್ಲ ಇಡೀ 140 ಶಾಸಕರಿಗೆ ಗೊತ್ತಿದೆ ಎಂದು ರಂಗನಾಥ್ ಹೇಳಿದ್ದಾರೆ.

ತುಮಕೂರಿನಲ್ಲಿ ದಲಿತ ಸಿಎಂ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಎಲ್ಲರಿಗೂ ಒಳ್ಳೆಯದಾಗಲಿ ನಾನು ಜಾತಿ ಧರ್ಮದ ಬಗ್ಗೆ ಮಾತನಾಡೋಕೆ ಹೋಗಲ್ಲ. ಕಾಂಗ್ರೆಸ್ ಎಲ್ಲಾ ಒಂದು. ಎಲ್ಲಾ ಜಾತಿ ಧರ್ಮಗಳನ್ನ ಸೇರಿಸಿ ಇರುವ ಜಾತ್ಯಾತೀತ ಪಕ್ಷ ನಮ್ಮದು ಎಂದು ರಂಗನಾಥ್ ಹೇಳಿದ್ದಾರೆ.

- Advertisement -

Latest Posts

Don't Miss