- Advertisement -
Sandalwood: ಮೂರು ಸುರೇಶ್ ಅಂತಾನೇ ಫೇಮಸ್ ಆಗಿರುವ ಹಾಸ್ಯ ಕಲಾವಿದ ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ಹಾಸನದವರಾಗಿರುವ ಮೂಗು ಸುರೇಶ್ ಅವರು, ಅವರ ಫ್ಯಾಮಿಲಿಯಲ್ಲಿ 6ನೇ ಮಗ. ಮನೆಯಲ್ಲಿ ಎಲ್ಲರೂ ವಿದ್ಯಾವಂತರು. ಸುರೇಶ್ ಕೂಡ ಡಿಗ್ರಿ ಮಾಡಿದ್ದಾರೆ. ಹಾಸನದಿಂದ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದ ಸುರೇಶ್ ಅವರು, ಸದ್ಯ ಬೆಂಗಳೂರಿನಲ್ಲಿದ್ದಾರೆ.
ಶಾಲಾ-ಕಾಲೇಜುಗಳಲ್ಲೇ ಸುರೇಶ್ ಅವರು ನಟನೆಯಲ್ಲಿ ಪ್ರವೀಣರಾಗಿದ್ದರು. ಗೆಳೆಯರೆಲ್ಲ ಸೇರಿ ನಾಟಕ ಬರೆದು, ಅವರೇ ನಟಿಸುತ್ತಿದ್ದರು. ಈ ರೀತಿ ಶಾಲಾ ದಿನಗಳಲ್ಲೇ ಸುರೇಶ್ ಡ್ರಾಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದರು. ಬಳಿಕ ಹಲವು ವರ್ಷಗಳ ನಂತರ, ಹಲವು ನಾಟಕಗಳನ್ನು ಮಾಡಿ, ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದರು. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -

