Wednesday, December 3, 2025

Latest Posts

DK ಆಗಮನಕ್ಕೂ ಮುನ್ನವೇ ಅಪಚಾರ? ದೇಗುಲದಲ್ಲಿ ದಿಢೀರ್ ಹೆಜ್ಜೇನು ದಾಳಿ

- Advertisement -

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಐತಿಹಾಸಿಕ ಭೂವರಾಹನಾಥ ದೇವಸ್ಥಾನದಲ್ಲಿ ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಧಾರ್ಮಿಕ ಭೇಟಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿಗಳೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್‌ ಮುಗಿಸಿದ ಬಳಿಕ ಡಿಕೆಶಿ ದೇವಸ್ಥಾನಕ್ಕೆ ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಮೃತ್ಯುಂಜಯ ಹೋಮದಲ್ಲಿ ಭಾಗವಹಿಸಿದರು. ವಿಶೇಷ ಪೂಜಾ ವಿಧಿಗಳು ಮುಕ್ತಾಯವಾದ ನಂತರ ಅವರು ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.

ಆದಾಗ್ಯೂ, ಡಿಕೆಶಿ ಆಗಮನಕ್ಕೂ ಮುನ್ನವೇ ದೇಗುಲದ ಆವರಣದಲ್ಲಿ ಅಪ್ರತೀಕ್ಷಿತ ಘಟನೆ ನಡೆದಿದೆ. ಹೋಮದ ಹೊಗೆ ಮತ್ತು ಗದ್ದಲದ ಪರಿಣಾಮ ದೇಗುಲದ ಬಳಿ ಇದ್ದ ಹೆಜ್ಜೇನು ಗುಂಪು ಭಕ್ತರ ಮೇಲೆ ದಾಳಿ ನಡೆಸಿದೆ. ಇದರಿಂದ ಕೆಲ ಭಕ್ತರು ಹೆದರಿ ಓಡಾಟಕ್ಕೆ ದಿಕ್ಕೇ ಇಲ್ಲದ ಸ್ಥಿತಿ ನಿರ್ಮಾಣವಾಯಿತು ಹಾಗೂ ಅನೇಕರಿಗೆ ಚುಚ್ಚು ಗಾಯಗಳಾಗಿದ್ದವು. ದೇಗುಲದ ಪರಿಸರದಲ್ಲಿದ್ದ ಭಕ್ತರು ಕೆಲ ಕಾಲ ಆತಂಕಕ್ಕೆ ಒಳಗಾದರು.

ಡಿಕೆಶಿವಕುಮಾರ್‌ ಅವರ ಆಗಮನಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪೂರ್ವಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದರು. ಇದೇ ವೇಳೆ ನಡೆದ ಹೆಜ್ಜೇನು ದಾಳಿಯಿಂದ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರೂ, ನಂತರ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.

ಇತ್ತ ಇತ್ತೀಚಿನ ರಾಜಕೀಯ ಬೆಳವಣಿಗೆಯ ಸಂದರ್ಭದಲ್ಲಿ ಸಿಎಂ ಸ್ಥಾನ ವಂಚಿತನಾದ ಡಿಕೆಶಿ ಭೂವರಾಹನಾಥ ಸ್ವಾಮಿಯ ಮೊರೆ ಹೋಗಿದ್ದಾರೆ ಎಂಬ ಚರ್ಚೆಗಳು ಸದ್ದು ಮಾಡುತ್ತಿವೆ. ದೇವಾಲಯದಲ್ಲಿ ನಡೆಯುವ ಈ ವಿಶೇಷ ಹೋಮ-ಹವನವು ಶನಿವಾರಗಳಂದು ಸಾಮಾನ್ಯವಾಗಿ ನಡೆಯುತ್ತದೆ. ಇದರಿಂದಾಗಿ ಹೆಚ್ಚಿನ ಭಕ್ತರು ದೇಗುಲಕ್ಕೆ ಆಗಮಿಸಿದ್ದರು.

ಹೆಜ್ಜೇನು ದಾಳಿಯ ನಂತರ ಭಕ್ತರು ತಮ್ಮನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮುಂದಿನ ಕೆಲವು ಗಂಟೆಗಳ ಕಾಲ ದೇಗುಲ ನಿರ್ವಾಹಕರು ಭದ್ರತಾ ಕ್ರಮಗಳನ್ನು ಹೆಚ್ಚಿಸಿ, ಚರ್ಚೆಯನ್ನು ಶಾಂತಗೊಳಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss