Wednesday, December 3, 2025

Latest Posts

Tumakuru News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಿಶೇಷವೇತನರಿಗೆ ವಿಲ್ಚೇರ್ ವಿತರಣೆ

- Advertisement -

Tumakuru News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನಡೆದಾಡಲು ಬಾರದ ವಿಕಲಚೇತನರಿಗೆ ವ್ಹೀಲ್ಚೇರ್ ವಿತರಣೆ ಮಾಡಲಾಯಿತು.

ತಿಪಟೂರು ಗ್ರಾಮಾಂತರ ತಾಲ್ಲೂಕಿನ ಕಾರೆಹಳ್ಳಿ ವಲಯದ ಚವ್ವೆನಹಳ್ಳಿ ಹಾಗೂ ರಂಗಾಪುರ ಗ್ರಾಮದ ನಿವಾಸಿಗಳಾದ ಸುಶೀಲಮ್ಮ,ಕುಮಾರಸ್ವಾಮಿ ಹಾಗೂ ರಾಜು k ರವರು ವಿವಿದ ರೀತಿಯ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ನಡೆದಾಡಲು ಸಹ ಅಸಾದ್ಯವಾದ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಈ ಕಾರಣಕ್ಕೆ ಪರಮ ಫೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಜನಮಂಗಲ ಕಾರ್ಯಕ್ರಮದಡಿಯಲ್ಲಿ ಕಮೋಡ್ ವಿತ್ ವೀಲ್ ಚೇರ್, ಔಟ್ ಸೈಡ್ ವೀಲ್ ಚೇರನ್ನು ಮಂಜೂರು ಮಾಡಿದ್ದಾರೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮಾಂತರ ಯೋಜನಾಧಿಕಾರಿ ಸುರೇಶ್.ಕೆ ರವರ ನೇತೃತ್ವದಲ್ಲಿ ವಿತರಿಸಿ ಧರ್ಮಸ್ಥಳದ ಪರವಾಗಿ ವಿಶೇಷಚೇತನರಿಗೆ ಸಾಂತ್ವಾನ ಹೇಳಲಾಯಿತು.

ಈ ಸಂದರ್ಭದಲ್ಲಿ ಕಾರೇಹಳ್ಳಿ ವಲಯದ ಮೇಲ್ವಿಚಾರಕಿ ಕಲ್ಯಾಣಿ,ಸೇವಾಪ್ರತಿನಿಧಿ, ಧರ್ಮಸ್ಥಳ ಸಂಘದ ಪಾಲುದಾರಬಂದುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Latest Posts

Don't Miss