Sandalwood: ಮೂಗು ಸುರೇಶ್ ಅವರು ಇಡೀ ಸಿನಿಮಾದಲ್ಲಿ ಡೈಲಾಗ್ ಇಲ್ಲದೇ, ರೋಲ್ ನಿಭಾಯಿಸಿದ್ದು, ನಕ್ಕು ನಗಿಸಿದ್ದಾರೆ. ಡೈಲಾಗ್ ಇಲ್ಲದಿದ್ದರೂ, ಮ್ಯಾಜಿಕ್ ಮಾಡಿ ಗೆದ್ದ ಸಿನಿಮಾ ಅದು. ಆ ಸಿನಿಮಾ ಬಗ್ಗೆ ಮೂಗು ಸುರೇಶ್ ಮಾತನಾಡಿದ್ದಾರೆ.
ಅತೀ ಮಧುರ ಅನುರಾಗ ಸಿನಿಮಾದಲ್ಲಿ ಮೂಗು ಸುರೇಶ್ ಅವರು ಪೋಲೀಸ್ ಪೇದೆ ಪಾತ್ರ ನಿರ್ವಹಿಸಿದ್ದರು. ಇದರಲ್ಲಿ ಅವರಿಗೆ ಸಣ್ಣ ಡೈಲಾಗ್ ನೀಡಲಾಗಿದ್ದು, ನಾಯಕ ನಟನ ಫೋಟೋ ಹಿಡಿದು, ಅವರನ್ನು ಹುಡುಕಲು ಓಡಾಡುವ ಪಾತ್ರ ಅದಾಗಿತ್ತು.
ಕಾಶಿನಾಥ್- ವಿಜಯಲಕ್ಷ್ಮೀ ನಟನೆಯ ಆ ಸಿನಿಮಾದಲ್ಲಿ ಡೈಲಾಗ್ ಹೆಚ್ಚು ಹೇಳದೇ ನಗಿಸಿದ್ದರು ಮೂಗು ಸುರೇಶ್ ಅವರು. ಫೋಟೋದಲ್ಲಿ ಇರುವವರನ್ನು ಹುಡುಕಿದರೆ, ಅವರಿಗೆ 10 ಸಾವಿರ ಬಹುಮಾನ ನೀಡುತ್ತಾರೆಂದು, ಮೂಗು ಸುರೇಶ್ ಅವರು ನಟನ ಫೋಟೋ ಹಿಡಿದು, ಸೈಕಲ್ ಹತ್ತಿ, ಕಾಶಿನಾಥ್ ಅವರನ್ನು ಹುಡುಕುವ ಸೀನ್ ಅದಾಗಿತ್ತು. ಆ ಸೀನ್ ಬಗ್ಗೆ ಮೂಗು ಸುರೇಶ್ ವಿವರಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

