Wednesday, December 3, 2025

Latest Posts

Recipe: Winter Special: ಲೆಹ್ಸುನಿ ಪಾಲಕ್ ಪನೀರ್ ರೆಸಿಪಿ (ಬೆಳ್ಳುಳ್ಳಿ ಪಾಲಕ್ ಪನೀರ್)

- Advertisement -

Recipe: ಬೇಕಾಗುವ ಸಾಮಗ್ರಿ: 1 ಕಪ್ ಪಾಲಕ್, ಪನೀರ್, 1 ಸ್ಪೂನ್ ಕಾಳುಮೆಣಸು, ಜೀರಿಗೆ, ಧನಿಯಾ, 3 ಸ್ಪೂನ್ ಎಣ್ಣೆ, 2ರಿಂದ 3 ಮೆಣಸು, ಜೀರಿಗೆ, 1 ಇಡೀ ಬೆಳ್ಳುಳ್ಳಿ, 1 ಟೋಮೆಟೋ, ಕೊತ್ತೊಂಬರಿ ಸೊಪ್ಪು, ಸ್ವಲ್ಪ ಸಕ್ಕರೆ, ಅಗತ್ಯವಿದ್ದರೆ ಕ್ರೀಮ್, ಉಪ್ಪು.

ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಕಾಳುಮೆಣಸು, ಜೀರಿಗೆ, ಧನಿಯಾ ಎಲ್ಲವನ್ನೂ ಹಾಕಿ ಚೆನ್ನಾಗಿ ಹುರಿದು, ಪುಡಿ ಮಾಡಿ. ಇದು ಸ್ಪೆಶಲ್ ಮಸಾಲೆ ಪುಡಿ.

ಪಾಲಕ್ ಚೆನ್ನಾಗಿ ವಾಶ್ ಮಾಡಿ, ಕ್ಲೀನ್ ಮಾಡಿ. ಬಳಿಕ ಬಿಸಿ ನೀರಿಗೆ ಹಾಕಿ, ಮತ್ತೆ ಐಸ್ ನೀರಿಗೆ ಹಾಕಿ ಕ್ಲೀನ್ ಮಾಡಿ. ಬಳಿಕ ಇದರ ಪೇಸ್ಟ್ ಮಾಡಿ. ಈಗ ಪ್ಯಾನ್‌ಗೆ ಎಣ್ಣೆ, ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ಹುರಿಯಿರಿ. ಬಳಿಕ ಪಾಲಕ್ ಪೇಸ್ಟ್, ಸ್ವಲ್ಪ ನೀರು ಹಾಕಿ ಮಂದ ಉರಿಯಲ್ಲಿ 15 ನಿಮಿಷ ಬೇಯಿಸಿ.

ಬಳಿಕ ರೆಡಿ ಮಾಡಿದ ಪುಡಿ, ಉಪ್ಪು, ಸಕ್ಕರೆ, ತುಪ್ಪ, ಕೊತ್ತೊಂಬರಿ ಸೊಪ್ಪು, ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿ, 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಬಳಿಕ ಟೋಮೆಟೋ, ಹುರಿದ ಪನೀರ್ ಹಾಕಿ ಮಿಕ್ಸ್ ಮಾಡಿ. ಮೇಲಿಂದ ಕ್ರೀಮ್, ಹುರಿದ ಬೆಳ್ಳುಳ್ಳಿ ಹಾಕಿ ಗಾರ್ನಿಶ್ ಮಾಡಿ. ಚಪಾತಿ, ರೋಟಿ ಜತೆ ಇದನ್ನು ಸವಿಯಬಹುದು.

- Advertisement -

Latest Posts

Don't Miss