- Advertisement -
Uttara Pradesh: ಗೋಲ್ಗಪ್ಪಾ ಅಂದ್ರೆ ಯಾರಿಗೇ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಜನ ಅದನ್ನು ಮೆಚ್ಚಿ ಸವಿಯುತ್ತಾರೆ. ಆದರೆ ಇಲ್ಲೋರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ ಎಡವಟ್ಟು ಮಾಡಿಕ“ಂಡಿದ್ದು, ಇನ್ನು ಜನ್ಮದಲ್ಲಿ ಗೋಲ್ಗಪ್ಪಾ ಸುದ್ದಿಗೆ ಹೋಗಲ್ಲ ಅಂತಿದ್ದಾಳೆ.
ಉತ್ತರಪ್ರದೇಶದ ಓರೈಯ್ಯಾ ಜಿಲ್ಲೆಯಲ್ಲಿ ಓರ್ವ ಮಹಿಳೆ ಗೋಲ್ಗಪ್ಪಾ ತಿನ್ನಲು ಹೋಗಿ, ಬಾಯಿ ಆ ಮಾಡಿದ್ದು, ತೆರೆದ ಬಾಯನ್ನು ಮುಚ್ಚಲು ವೈದ್ಯರ ಬಳಿ ಹೋಗಿದ್ದಾಳೆ. ಗೋಲ್ಗಪ್ಪಾ ತಿನ್ನಲು ಹೋಗಿ, ಆಕೆಯ ಬಾಯಿಯ ಮೂಳೆ ಸಿಲುಕಿದ್ದು, ಬಾಯಿ ಮುಚ್ಚಲು ಸಾಧ್ಯವಾಗದೇ, ಆಕೆ ವೈದ್ಯರ ಬಳಿ ಹೋಗುವ ಪರಿಸ್ಥಿತಿ ಬಂದಿದೆ.
ಆದರೂ ಬಾಯಿ ಮುಚ್ಚಲು ಸಾಧ್ಯವಾಗಲಿಲ್ಲ. ಹಾಗಾಗಿ ಹೈಯರ್ ಆಸ್ಪತ್ರೆಗೆ ಕಳುಹಿಸಿದ್ದು, ಚಿಕಿತ್ಸೆ ನಡೆಯುತ್ತಿದ್ದು, ಆಕೆ ಮಾತನಾಡಲು ಕೂಡ ಸಾಧ್ಯವಾಗುತ್ತಿಲ್ಲ.
- Advertisement -

