Sandalwood: ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ರಾಗಿರುವ ಮೂಗು ಸುರೇಶ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರನ್ನು ಯಾಕೆ ಮೂಗು ಸುರೇಶ್ ಅಂತಾ ಕರೀತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಮೂಗು ಸುರೇಶ್ ಅವರಿಗೆ ಈ ಹೆಸರು ಬರಲು ಕಾರಣ, ಅವರ ಮೂಗು ಉದ್ದವಿದೆ. ಹಾಗಾಗಿ ಅವರನ್ನು ಹೀಗೆ ಕರೆಯಲಾಗತ್ತೆ. ಅವರೆಲ್ಲಿ ಹೋದರೂ ಸುೇರೇಶ್ ಅನ್ನೋ ಹೆಸರಿನ ಯಾರಾದರೂ ಎರಡನೇ ವ್ಯಕ್ತಿ ಇರುತ್ತಿದ್ದರಂತೆ. ಅದರಲ್ಲೂ ಅಂದಿನ ಕಾಲದಲ್ಲಿ ಸುರೇಶ್ ಅನ್ನೋ ಹೆಸರಿನವರು ಹೆಚ್ಚಿನ ಜನರಿದ್ದರು. ಹಾಗಾಗಿ ಕೆಲವರು ಇವರಿಗೆ ಮೂಗು ಸುರೇಶ್ ಅಂತಾ ಹೆಸರಿಸಿದರಂತೆ.
ಮುಂಚೆ ಎಲ್ಲಾ ಸುರೇಶ್ ಅವರಿಗೆ ಈ ವಿಷಯದಿಂದ ಬೇಸರವಾಗುತ್ತಿತ್ತಂತೆ. ಆದರೆ ಬಳಿಕ ಅವರಿಗೆ ಆ ಹೆಸರಿನ ಮೇಲೆ ಪ್ರೀತಿಯಾಯಿತಂತೆ. ಇನ್ನು ಅಣ್ಣಾವ್ರು ಕೂಡ ಇವರ ಮೂಗನ್ನು ಹಿಡಿದಿದ್ದರಂತೆ. ಮೂಗು ಸುರೇಶ್ ಅವರ ಪಾತ್ರವನ್ನು ತೆರೆ ಮೇಲೆ ನೋಡಿ, ಇವರನ್ನು 1 ಸಲ ಭೇಟಿಯಾಗಬೇಕು ಎಂದಿದ್ದರಂತೆ. ಬಳಿಕ ಹಲವು ಬಾರಿ ಸುರೇಶ್ ಅವರು ಅಣ್ಣಾವ್ರನ್ನು ಭೇಟಿಯಾದರು. ಅಣ್ಣಾವ್ರನ್ನು ಪ್ರಥಮ ಬಾರಿ ನೋಡಲು ಹೋದಾಗ, ಅವರಿಗೆ ಹಾರ ಹಾಕಿ, ಕೈ ಕುಲುಕಿದರಂತೆ. ಆಗ ಇವರ ಮೂಗನ್ನು ಹಿಡಿದು, ಹೆಚ್ಚು ಕಮ್ಮಿ ನಮ್ಮ ಹಾಗೇ ಇದೆ ಮೂಗು ಎಂದಿದ್ದರಂತೆ. ಇನ್ನೂ ಅನೇಕ ಕುತೂಹಲಕಾರಿ ವಿಷಯಕ್ಕಾಗಿ ಸಂದರ್ಶನ ವೀಕ್ಷಿಸಿ.

