Wednesday, December 3, 2025

Latest Posts

“ನಾವಿಬ್ಬರೂ ಬ್ರದರ್ಸ್‌, ಒಂದೇ ಪಕ್ಷ.. ಒಂದೇ ಸಿದ್ಧಾಂತ”

- Advertisement -

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಜೊತೆಯಾಗಿ ಬಂದು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಮೊನ್ನೆ ಡಿಕೆ ಶಿವಕುಮಾರ್‌ ಬ್ರೇಕ್‌ಫಾಸ್ಟ್‌ಗೆ ಬಂದಾಗಲೇ, ನನಗೆ ಆಹ್ವಾನ ನೀಡಿದ್ರು. ಮಂಗಳವಾರ ಬನ್ನಿ ಎಂದು ಹೇಳಿದ್ರು ಬಂದಿದ್ದೇನೆ. ಪಾರ್ಟಿ ವಿಚಾರಗಳನ್ನ ಚರ್ಚೆ ಮಾಡಿದ್ದೀವಿ.

ಮೊನ್ನೆಯೇ ಚರ್ಚೆ ಮಾಡಿದ್ದೀವಿ. ಹೈಕಮಾಂಡ್‌ ಏನ್‌ ಹೇಳ್ತಾರೋ ಅದರಂತೆ ನಡೆದುಕೊಳ್ಳಬೇಕೆಂದು ಹೇಳಿದ್ದೀವಿ. ರಾಹುಲ್‌ ಗಾಂಧಿ ಏನ್‌ ಡಿಸಿಷನ್‌ ತೆಗೆದುಕೊಳ್ತಾರೋ ಅದರಂತೆ ನಡೆದುಕೊಳ್ತೀವಿ. ಇವತ್ತೂ ಕೂಡ ಅದನ್ನೇ ಚರ್ಚಿಸಿದ್ದೇವೆ. ನಾವು ಯಾವಾಗಲೂ ಒಗ್ಗಟ್ಟಾಗಿದ್ದೇವೆ. ಸಿಎಲ್‌ಪಿ ಮೀಟಿಂಗ್‌ ಕರೆದು ಅಲ್ಲೇ ಊಟ ಮಾಡಿಸುತ್ತೇವೆ.

ಇನ್ನು, ನಾವಿಬ್ಬರೂ ಬ್ರದರ್ಸ್‌. ಒಂದೇ ಪಕ್ಷದಲ್ಲಿದ್ದೇವೆ. ಒಂದೇ ಸಿದ್ಧಾಂತ ನಂಬಿಕೊಂಡಿದ್ದೀವಿ. ಒಟ್ಟಿಗೆ ಕೆಲಸ ಮಾಡ್ತೀವಿ. 2028ಕ್ಕೂ ನಾವು ಒಟ್ಟಿಗೆ ಕೆಲಸ ಮಾಡ್ತೀವಿ. ಅಧಿಕಾರಕ್ಕೆ ತರುತ್ತೇವೆ.

ಹೈಕಮಾಂಡ್‌ ನಾಯಕರನ್ನು ಭೇಟಿಯಾಗ್ತೀರಾ ಅನ್ನೋ ಮಾಧ್ಯಮಗಳ ಪ್ರಶ್ನೆಗೆ
ಸಮಯ ಸಿಕ್ಕಿದ್ರೆ, ಅವರು ನಮಗೆ ಅಪಾಯಿಟ್‌ಮೆಂಟ್‌ ಕೊಟ್ರೆ ಭೇಟಿಯಾಗುವುದಾಗಿ ಸಿದ್ದರಾಮಯ್ಯ ಹೇಳಿದ್ರು. ನಾಳೆ ಮಂಗಳೂರಿನಲ್ಲಿ ಒಂದು ಫಂಕ್ಷನ್‌ ಇದೆ. ನಾನು, ವೇಣುಗೋಪಾಲ್‌ ಇಬ್ಬರೂ ಅತಿಥಿಗಳಾಗಿ ಹೋಗುತ್ತಿದ್ದೇವೆ. ಅಲ್ಲಿ ಭೇಟಿಯಾಗುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ಹೇಳಿದ್ರು.

- Advertisement -

Latest Posts

Don't Miss