- Advertisement -
Tumakuru News: ತುಮಕೂರು: ಕಳ್ಳತನವೆಂದು ತಿಳಿದಿದ್ದ ಎಟಿಎಂ ಮಷಿನ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದ್ದು, ಅದು ಕಳ್ಳತನವಲ್ಲ, ಕುಡಿದ ಮತ್ತಿನಲ್ಲಿ ಮಾಡಿದ ರಾದ್ಧಾಂತವೆಂದು ತಿಳಿದಿದೆ.
ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ನವೆಂಬರ್ 27ರ ರಾತ್ರಿ ವೇಳೆ ವಡಿವೇಲು ಸ್ವಾಮಿ ಎಂಬಾತ ಕುಡಿದು ಎಟಿಎಂ ಮಷಿನ್ ಬಳಿ ಬಂದಿದ್ದಾನೆ. ಬಳಿಕ ಹಣ ಡ್ರಾ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಹಣ ಸಿಗದ ಕಾರಣ, ಆಚೆ ಇದ್ದ ಕಲ್ಲನ್ನು ತಂದು ಎಟಿಎಂ ಮೇಲೆ ಹಾಕಿ ಧ್ವಂಸ ಮಾಡಿದ್ದಾನೆ.
ಮರುದಿನ ಎಟಿಎಂ ಸ್ಥಿತಿ ಕಂಡು ಸ್ಥಳೀಯರು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ ಎಂದು ದೂರು ನೀಡಿದ್ದಾರೆ. ಅದೇ ಆಯಾಮದಲ್ಲಿ ತುರುವೇಕೆರೆ ಪೋಲೀಸರು ತನಿಖೆ ನಡೆಸಿದ್ದಾರೆ. ಬಳಿಕ ಸಿಸಿ ಟಿವಿ ಪರಿಶೀಲನೆ ಮಾಡಿದಾಗ ಕುಡುಕನ ರಾದ್ಧಾಂತ ಬಯಲಿಗೆ ಬಂದಿದೆ. ಬಳಿಕ ವಡಿವೇಲ್‌ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
- Advertisement -

