Wednesday, December 3, 2025

Latest Posts

Tumakuru: ತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹ*

- Advertisement -

Tumakuru News: ತುಮಕೂರಿನಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, 38 ವರ್ಷದ ಮಂಜುಳಾ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿಎಸ್ ಪುರದ ಹಿಂಡಸ್ಗೆರೆಯ ತೋಟದ ಮನೆಯಲ್ಲಿ ಈ ಕೃತ್ಯವೆಸಗಿದ್ದು, ಹಂತಕರು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ. ಇತ್ತೀಚೆಗೆ ಮಂಜುಳ ಮಗನ ಮದುವೆ ಮಾಡಿದ್ದಳು. ಮಗ ತನ್ನ ಪತ್ನಿ ಮನೆಗೆ ಹೋದಾಗ ಈ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಆಕೆಯ ಪತಿಯ ಸಹೋದರ ಮನೆ ಬಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಆತ ಸಿಎಸ್‌ಪುರ ಪೋಲೀಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Latest Posts

Don't Miss