Wednesday, December 3, 2025

Latest Posts

ಹೈಕಮಾಂಡ್‌ ಹೇಳಿದಾಗ ಡಿಕೆಶಿ ಸಿಎಂ – ಮೀಟಿಂಗ್ ನಂತರ ಸಿದ್ದು ಹೇಳಿಕೆ

- Advertisement -

ಇಂದು ಡಿಸಿಎಂ ಡಿಕೆಶಿವಕುಮಾರ್‌ ಸದಾಶಿವನಗರ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರಿಗೆ ನಾಟಿ ಕೋಳಿ ಬ್ರೇಕ್‌ ಫಾಸ್ಟ್‌ ಅರೆಂಜ್‌ ಮಾಡಲಾಗಿತ್ತು. ಇಬ್ಬರು ಒಟ್ಟಿಗೆ ಕೂತು ಚರ್ಚೆ ಮಾಡುತ್ತಾ ಬ್ರೇಕ್‌ ಫಾಸ್ಟ್‌ ಮಾಡಿದ್ದಾರೆ.

ಡಿಕೆ ಶಿವಕುಮಾರ್‌ ಅವರ ಸದಾಶಿವ ನಗರದ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಡಿಕೆಶಿ ಯಾವಾಗ ಸಿಎಂ ಆಗುತ್ತಾರೆ ಎಂಬ ಪ್ರಶ್ನೆಗೆ ಹೈಕಮಾಂಡ್‌ ಹೇಳಿದಾಗ ಡಿಕೆ ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದು ಉತ್ತರ ನೀಡಿ ತೆರಳಿದರು.

ಈ ಸಂದರ್ಭದಲ್ಲಿ ಹಲವು ವಿಚಾರಗಳ ಬಗ್ಗೆ ಇಬ್ಬರು ಮಾತನಾಡಿದ್ದೇವೆ ಎಂದು ಸಿಎಂ ತಿಳಿಸಿದರು. ನಾವು ಪಕ್ಷದ ವಿಚಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಇದೇ ಡಿಸೆಂಬರ್‌ 8 ರಿಂದ ಅಧಿವೇಶನ ಇರುವುದರಿಂದ ನಮ್ಮ ರಣ ನೀತಿ ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು. ನಾವು ಹಿಂದೆಯೂ ಒಗ್ಗಟ್ಟಾಗಿದ್ದೆವು, ಈಗಲೂ ಒಗ್ಗಟ್ಟಾಗಿದ್ದೇವೆ. ನಮ್ಮಿಬ್ಬರದ್ದು ಒಂದೇ ಸಿದ್ಧಾಂತ. 2028ಕ್ಕೆ ಮತ್ತೆ ನಾವು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ದ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವ್ರು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸೋದಾಗಿ ಹೇಳಿದ್ದಾರೆ. ಅವರು ಏನೇ ವಿಚಾರ ಪ್ರಸ್ತಾಪ ಮಾಡಿದರೂ ನಾವು ಒಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದರು. ಡಿ.8 ರಂದು ಸಂಸದರ ಸಭೆ ಇರುವ ಕಾರಣ ದೆಹಲಿಗೆ ನಾವು ಹೋಗುತ್ತೇವೆ. ಸಮಯ ಸಿಕ್ಕಿದರೆ ಹೈಕಮಾಂಡ್ ಕರೆದರೆ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ನಿಮ್ಮ ಮನೆಯ ಬ್ರೇಕ್‌ಫಾಸ್ಟ್‌ಗೂ ಡಿಕೆಶಿ ಅವರ ನಿವಾಸದ ಬ್ರೇಕ್‌ಫಾಸ್ಟ್‌ಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಇವನು ವೆಜಿಟೇರಿಯನ್, ನಾನು ನಾನ್ ವೆಜಿಟೇರಿಯನ್. ಆದರೆ ಇವತ್ತು ಇವನ ಮನೆಯಲ್ಲಿ ನಾನ್‌ವೆಜ್‌ ಇತ್ತು. ನಮ್ಮ ಮನೆಯಲ್ಲಿ ವೆಜ್‌ ಇತ್ತು. ಇಲ್ಲಿ ಒರಿಜಿನಲ್ ನಾಟಿ ಕೋಳಿ ಸಿಗುವುದಿಲ್ಲ. ಹಳ್ಳಿಯಿಂದ ನಾಟಿಕೋಳಿ ತರಿಸು ಎಂದಿದ್ದೆ ಎಂದರು. ಡಿಸೆಂಬರ್ 3 ರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಅ ಸಭೆಗೆ ವೇಣುಗೋಪಾಲ್ ಬರುತ್ತಾರೆ. ನಾನು ವೇಣುಗೋಪಾಲ್ ಅವತ್ತು ಮಾತನಾಡುತ್ತೇವೆ ಎಂದು ಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss