Sandalwood: ಕಲಾವಿದರಾಗಿರುವ ಬಲ್ರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಈಗಾಗಲೇ ಕಾಂತಾರದ ಬಗ್ಗೆ, ತಮ್ಮ ಸಿನಿಜರ್ನಿ ಬಗ್ಗೆ, ತಮ್ಮ ಬಾಲ್ಯ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಬಗ್ಗೆ ಮಾತನಾಡಿರುವ ಬಲ್ರಾಜ್ವಾಡಿ ಅವರು, ಅಂದಿನ ಮತ್ತು ಇಂದಿನ ಸಿನಿಮಾ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ. ಮುಂಚೆ ಎಲ್ಲ ಪುಸ್ತಕಗಳನ್ನು ಓದಿ, ಸಿನಿಮಾ ಮಾಡುತ್ತಿದ್ದರು. ಆದರೆ ಈಗ ಆ ರೀತಿ ಸಿನಿಮಾಗಳು ತುಂಬಾ ಕಡಿಮೆ ಎಂದಿದ್ದಾರೆ. ಅಲ್ಲದೇ, ವಿದೇಶದಲ್ಲಿ ಕೆಲ ಸಿನಿಮಾಗಳು, ಯಾವ ಸಮಯದಲ್ಲಿ ಹೋದರೂ ಹೌಸ್ಫುಲ್ ಇರುತ್ತದೆ. ಆದರೆ ಅದೇ ಸಿನಿಮಾವನ್ನು ನೀವು ಕನ್ನಡದಲ್ಲಿ ಮಾಡಿದ್ರೆ, ಅದನ್ನು ನೋಡಲು ಯಾರೂ ಬರುವುದಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಚೆ ಎಲ್ಲ ಸಿನಿಮಾ ಥಿಯೇಟರ್ಗಳು ಹೆಚ್ಚಿರಲಿಲ್ಲ. ಆದರೆ ಆಗಿನ ಕಾಲದ ಸಿಎಂಗಳು ನಾಟಕ ನೋಡಲು ರಂಗಭೂಮಿಗೆ ಬರುತ್ತಿದ್ದರು. ಏಕೆಂದರೆ, ಅಂದಿನ ಕಲಾವಿದರು, ನೆಲದ ಕಥೆಗಳನ್ನು ಹೇಳುತ್ತಿದ್ದರು. ಹಾಗಾಗಿ ಅದು ಮನಸ್ಸಿಗೆ ಮುಟ್ಟುತ್ತಿತ್ತು ಅಂತಾರೆ ಬಲ್ರಾಜ್ವಾಡಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

