Political News: ರಾಜ್ಯದಲ್ಲಿ ಸದ್ಯ ಸಿಎಂ ಯಾರಾಗ್ತಾರೆ ಅನ್ನೋ ಕುತೂಹಲ ಮೆನೆ ಮಾಡಿದೆ. ಅದೇ ರೀತಿ ದಿನ ಬೆಳಗಾದ್ರೆ ಬ್ರೇಕ್‌ಫಾಸ್ಟ್ ಮೀಟಿಂಗ್‌ದೇ ಸುದ್ದಿ. ಆದರೆ ಈ ಗದ್ದಲದ ನಡುವೆ ರಾಜ್ಯದಲ್ಲಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಯಾರೂ ಮಾತನಾಡದಿರುವುದೇ ಬೇಸರ ಅಂತಾ ಬಿಜೆಪಿ ನಾಯಕರು ದಿನೇ ದಿನೇ ನೆನಪಿಸಿಕ“ಡುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದಿದ್ದು, ಗುಣಮಟ್ಟದ ಶಿ7ಣ ನೀಡಲು ಸಾಧ್ಯವೇ ಅಂತಾ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣವೇನೆಂದರೆ, ಸರ್ಕಾರಿ ಶಾಲೆಯ“ಂದರಲ್ಲಿ ಕೇವಲ 4 ಶಿಕ್ಷರು ಮಾತ್ರವಿದ್ದು, ಅಲ್ಲಿನ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುರ್ಚಿ ಭಾಗ್ಯದ ಹಿಂದೆ ಬಿದ್ದಿರುವ ಈ ಜನವಿರೋಧಿ, ರೈತವಿರೋಧಿ ಕಾಂಗ್ರೆಸ್ ಸರ್ಕಾರ, ಆಡಳಿತದ ಕಡೆಯಾಗಲಿ, ಜನರ ಸಂಕಷ್ಟದ ಕಡೆಯಾಗಲಿ ನೋಡುತ್ತಲೇ ಇಲ್ಲ! ಅಭಿವೃದ್ಧಿ ದೂರದ ಮಾತು, ಇರುವುದನ್ನು ಉಳಿಸಿಕೊಳ್ಳುವುದೂ ಇವರಿಗೆ ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ಇಲಾಖೆಯಲ್ಲೂ ಕಾಂಗ್ರೆಸ್ ಸರ್ಕಾರದ ವೈಫಲ್ಯ, ದುರಾಡಳಿತದ ದುರಂತ ವರದಿಗಳು ದಿನವೂ ಹೊರಬರುತ್ತಿದೆ ಎಂದಿದ್ದಾರೆ ವಿಜಯೇಂದ್ರ.

