Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, ಈ ವರ್ಷದ ಸಿಂಹ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.
ಸಿಂಹ ರಾಶಿಗೆ ಜನ್ಮದಲ್ಲಿ ಕೇತು ಬಂದು ಕೂತಿದ್ದು ಇನ್ನೆರಡು ವರ್ಷ ಕೇತು ಹಾಗೇ ಇರಲಿದ್ದಾನೆ. ಅಲ್ಲದೇ ಅಷ್ಟಮದಲ್ಲಿ ಶನಿ ಇದ್ದು, ಇಬ್ಬರೂ ಬೆಂಬಿಡದ ರೀತಿಯಲ್ಲಿರಲಿದ್ದಾರೆ. ಹಾಗಾಗಿ ಈ ವರ್ಷ ನೀವು ಅನೇಕ ಸಮಸ್ಯೆ ಎದುರಿಸಬೇಕಾಗಬಹುದು.
ಸಾಲು ಸಾಲು ಸಮಸ್ಯೆ, ಅತೀಯಾದ ಕೋಪದ ವಾತಾವರಣವಿರುತ್ತದೆ. ಶತ್ರುಬಾಧೆ, ಹಿತ ಶತ್ರುಗಳ ಬಾಧೆ ಇರುತ್ತದೆ. ಸ್ನೇಹಿತರೇ ಮೋಸ ಮಾಡುವ ಸಾಧ್ಯತೆ ಇರುತ್ತದೆ. ತಿಳಿಯದೇ, ಅಪರಾಧ, ಅಪನಿಂದನೆಯಾಗಬಹುದು, ಎಚ್ಚರಿಕೆ.
ಪ್ರಯೋಜನಕ್ಕೆ ಬಾರದ ರೀತಿ ಖರ್ಚಾಗಲಿದೆ. ಉಳಿತಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬರಬಹುದು. ಬುದ್ಧಿ ಮಂದಗತಿಯಲ್ಲಿರಲಿದೆ. ಯಾವ ನಿರ್ಧಾರ ತೆಗೆದುಕ“ಳ್ಳಬೇಕು ಎಂದು ತಿಳಿಯುವುದಿಲ್ಲ. ಗುರುಬಲವಿದ್ದರೂ, ಯಾವ ಕೆಲಸದಲ್ಲೂ ಯಶಸ್ಸು ಸಿಗುವುದಿಲ್ಲ. ಕಾರಣ ಸಮಸ್ಯೆ ತರುವ ಗ್ರಹಗಳು ಕೂಡ ಇದೆ. ಹಾಗಾಗಿ ಸಿಂಹ ರಾಶಿಯವರು ಶನಿ ಶಾಂತಿ, ನವಗ್ರಹ ಪೂಜೆ ಮಾಡಿಸುವುದು ಉತ್ತಮ.

