Spiritual: ಖ್ಯಾತ ಜ್ಯೋತಿಷಿಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ತುಲಾ ರಾಶಿಯ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ..
2026ರಲ್ಲಿ ಅತ್ಯಂತ ಲಕ್ಕಿ ರಾಶಿ ಅಂದ್ರೆ ಅದು ತುಲಾ ರಾಶಿ. 2025ರಲ್ಲಿ ಕೂಡ ಇವರು ಲಕ್ಕಿಯಾಗಿಯೇ ಇದ್ದರು. 2026ರಲ್ಲಿ ಆ ಲಕ್ ಇನ್ನೂ ಹೆಚ್ಚಾಗಿ, ಯಾವುದೇ ಉದ್ಯಮ ಆರಂಭಿಸಿದರು, ಅದರಲ್ಲಿ ಲಾಭ ಗಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
10 ರೂಪಾಯಿ ಬಂಡವಾಳ ಹಾಕಿದರೂ 100 ರೂಪಾಯಿ ಲಾಭ ನೋಡುವ ಸುಯೋಗ ತುಲಾ ರಾಶಿಯವರಿಗಿದೆ. ಅದರಲ್ಲೂ ತುಲಾ ರಾಶಿಯ ವಿಜ್ಞಾನಿಗಳಿಗೆ ಅತ್ಯಂತ ಫಲಪ್ರದವಾದ ವರ್ಷ ಇದಾಗಲಿದೆ. 9ನೇ ಮನೆಯಲ್ಲಿರುವ ಗುರು ಎಲ್ಲ ಕೆಲಸದಲ್ಲೂ ಯಶಸ್ಸು ತಂದುಕ“ಡಲಿದ್ದಾರೆ.
ಅಲ್ಲದೇ ಹಣಕಾಸಿನ ಹೂಡಿಕೆಯಲ್ಲೂ ಲಾಭದ ವಾತಾವರಣವಿರುತ್ತದೆ. ಫ್ಯಾಮಿಲಿಯಲ್ಲೂ ನೆಮ್ಮದಿ ಇರುತ್ತದೆ. ಆದರೆ ಕೋಪ ನಿಯಂತ್ರಣದಲ್ಲಿದ್ದರೆ ಮಾತ್ರ ಈ ಎಲ್ಲ ಲಾಭ ನಿಮ್ಮ ಪಾಲಾಗುತ್ತದೆ.

