Spiritual: ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿಯಿಂದ 2026ರ ರಾಶಿ ಭವಿಷ್ಯ: ವೃಶ್ಚಿಕ ರಾಶಿ

Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದು, ವೃಶ್ಚಿಕ ರಾಶಿಯ ಈ ವರ್ಷದ ಫಲಾಫಲ ಹೇಗಿರಲಿದೆ ತಿಳಿಯೋಣ ಬನ್ನಿ..

ವೃಶ್ಚಿಕ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗುರು ವಕ್ರನಾಗಲಿದ್ದಾನೆ. ಹಾಗಾಗಿ ಸ್ವಲ್ಪ ಕಷ್ಟ-ನಷ್ಟಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಏಪ್ರಿಲ್ ತನಕ ಸಾಲ ಮಾಡುವುದು- ಸಾಲ ನೀಡುವ ಕೆಲಸ ಬೇಡ.

ಈ ಸಮಯದಲ್ಲಿ ಗುರುವಿನ ಬಲವಿಲ್ಲದ ಕಾರಣ, ಶುಭ ಕಾರ್ಯಗಳು ನಿಲ್ಲುತ್ತದೆ. ಆತುರದ ನಿರ್ಧಾರಗಳಿಂದ ಪಶ್ಚಾತಾಪ ಪಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಏಪ್ರಿಲ್‌ವರೆಗೂ ಮದುವೆ, ಮುಂಜಿ, ಮನೆ ಖರೀದಿ ಯೋಚನೆ ಯಾವುದನ್ನೂ ಮಾಡದಿರುವುದು ಉತ್ತಮ.

About The Author