Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರರ ರಾಶಿ ಭವಿಷ್ಯ ಹೇಳಿದ್ದು, ಈ ವರ್ಷ ಧನು ರಾಶಿ ಅಂದ್ರೆ ಧನಸ್ಸು ರಾಶಿಯವರಿಗೆ ಹೇಗಿರಲಿದೆ ಅಂತಾ ವಿವರಿಸಿದ್ದಾರೆ.
2026ರಲ್ಲಿ ಧನಸ್ಸು ರಾಶಿಯವರಿಗೆ ಸಫಲತೆಯೂ ಇದೆ, ವಿಫಲತೆಯೂ ಇದೆ. ಏಕೆಂದರೆ ಏಪ್ರಿಲ್‌ನಿಂದ ನಿಮ್ಮ ರಾಶಿಗೆ ಅಷ್ಟಮ ಶನಿ ಬರಲಿದ್ದು, ಕಾಟ ನೀಡಲಿದ್ದಾನೆ. ಅಲ್ಲದೇ ಗುರು ಕೂಡ ಅಷ್ಟಮದಲ್ಲಿದ್ದು ಆತನೂ ಸಮಸ್ಯೆ ತರುತ್ತಾನೆ. ಆರಂಭದಲ್ಲಿ ವ್ಯವಹಾರ ಉತ್ತಮವಾಗಿರುತ್ತದೆ. ಆದರೆ ನಂತರದಲ್ಲಿ ವ್ಯವಹಾರದಲ್ಲಿ ತುಂಬ ಅಡೆತಡೆಗಳು ಬರುವ ಸಾಧ್ಯತೆ ಇದೆ.
ಹಣಕಾಸಿನ ವಿಚಾರದಲ್ಲಿ ಮೋಸವಾಗುತ್ತದೆ. ದುಂದುವೆಚ್ಚವಾಗುತ್ತದೆ. ಸಹಾಯ ಮಾಡಲು ಹೋಗಿ ಮೋಸ ಹೋಗಬಹುದು. ಹಾಗಾಗಿ ಸಹಾಯ ಮಾಡುವ ಮುನ್ನ ಎಚ್ಚರದಿಂದಿರುವುದು ಉತ್ತಮ. ನಿಮ್ಮನ್ನು ಬಳಸಿಕ“ಂಡು ನಿಮಗೆ ಮೋಸ ಮಾಡುವ ಸಾಧ್ಯತೆ ಇರುತ್ತದೆ.
ಯಾರಾದರೂ ತಮ್ಮ ಸಮಸ್ಯೆ ಹೇಳಿ ಹಣ ಕೇಳಿದರೆ, ನೀವು ಅವರಿಗೆ ದಾನವಾಗಿ ಹಣ ನೀಡಬಹುದು. ಆದರೆ ಸಾಲವಾಗಿ ನೀಡಿದರೆ ಆ ಹಣ ಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಆದರೆ ಸಾವಿರಾರು ರೂಪಾಯಿ, ಲಕ್ಷ ರೂಪಾಯಿ ನೀಡುವುದಕ್ಕೂ ಮುನ್ನ ಯೋಚಿಸಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




