- Advertisement -
Tumakuru News: ತುಮಕೂರು: ಬೆಳ್ಳಂಬೆಳಿಗ್ಗೆಯೇ ತುಮಕೂರಿನ ಜನ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಗೋಲ್ಡ್ ರಾಬರಿ ಮಾಡಲಾಗಿದೆ.
ತುಮಕೂರಿನ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿನ್ನದಂಗಡಿಗೆ ಸಿನಿಮೀಯ ಶೈಲಿಯಲ್ಲಿ ಕನ್ನ ಹಾಕಲಾಗಿದೆ. ಮಹಾಲಕ್ಷ್ಮೀ ಜುವೆಲ್ಲರಿ ಶಾಪ್ನಲ್ಲಿ ಈ ಅವಘಡ ನಡೆದಿದ್ದು, ಅಂಗಡಿಯಲ್ಲೇ ಇದ್ದ ಮಾಲೀಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ದರೋಡೆಕೋರರು ಚಿನ್ನ, ಬೆಳ್ಳಿ, ಕ್ಯಾಶ್ ದರೋಡೆ ಮಾಡಲು ಯತ್ನಿಸಲಾಗಿದೆ.
ನಾಲ್ವರು ದರೋಡೆಕೋರರು ಅಂಗಡಿಗೆ ನುಗ್ಗಿದ್ದು, ಅಂಗಡಿ ಮಾಲೀಕ ಸುನೀಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಬೆರಳು ಕತ್ತರಿಸಿ, ಪ್ಲಾಸ್ಟರ್ನಿಂದ ಕೈ ಕಟ್ಟಿ ಕಳ್ಳತನಕ್ಕೆ ಯತ್ನಿಸಲಾಗಿದೆ. ಆ ಕ್ಷಣ ಸುನೀಲ್ ಕಿರುಚಿದ್ದು, ಜನ ಸೇರುತ್ತಿದ್ದಂತೆ ದರೋಡೆಕೋರರು ಪರಾಾರಿಯಾಗಿದ್ದಾರೆ. ಚೇಳೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
- Advertisement -

