Thursday, December 4, 2025

Latest Posts

STRR ಯೋಜನೆ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಪ್ರೊ. ಡಾ. ಸಿ.ಎನ್‌. ಮಂಜುನಾಥ್

- Advertisement -

Political News: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಪದ್ಮಶ್ರೀ ಪ್ರೊ. ಡಾ. ಸಿ.ಎನ್.ಮಂಜುನಾಥ್ ರವರು ಸಂಸದೀಯ ಅಧಿವೇಶನದಲ್ಲಿ ಮಹತ್ವದ ಸಾರ್ವಜನಿಕ ವಿಷಯವನ್ನು ಉಲ್ಲೇಖಿಸಿ, STRR Satellite Ring Road (NH 948A) ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾದ ಪರಿಹಾರವು ಹಲವು ವರ್ಷಗಳಿಂದ ಬಾಕಿ ಉಳಿದಿರುವ ಬಗ್ಗೆ ಗಂಭೀರವಾಗಿ ಗಮನಸೆಳೆದರು.

2021ರಲ್ಲಿ ಈ ಯೋಜನೆಗಾಗಿ 2,200 ಎಕರೆಗೂ ಹೆಚ್ಚು ಭೂಮಿ ರೈತರಿಂದ ಸ್ವಾಧೀನಪಡಿಸಿಕೊಂಡಿದ್ದರೂ ಭೂಸ್ವಾಧೀನದ ಪರಿಹಾರ ಇಂದಿಗೂ ಬಿಡುಗಡೆ ಅಗಿರುವುದಿಲ್ಲ. ಭೂಮಿಯನ್ನು ಕಳೆದುಕೊಂಡ ರೈತರು ಈಗ ಆರ್ಥಿಕ ಸಂಕಷ್ಟ, ಅಸ್ಥಿರತೆ ಮತ್ತು ಗಂಭೀರ ಚಿಂತೆಯಲ್ಲಿದ್ದು, ತಮ್ಮ ಜೀವನೋಪಾಯ ಹಾಗೂ ಭವಿಷ್ಯದ ಭದ್ರತೆಯ ಬಗ್ಗೆ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ.

ಸಂಚಾರ ಈ ಯೋಜನೆ ಅತ್ಯಂತ ಅಗತ್ಯವಾಗಿದ್ದು, ಇದರ ಮೂಲಕ ಬೆಂಗಳೂರು ನಗರದ ವಾಹನ ದಟ್ಟಣೆಯ ಒತ್ತಡ ಗಮನಾರ್ಹವಾಗಿ ಕಡಿಮೆಯಾಗಲಿದ್ದು, ನಗರ ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ಸುಗಮವಾಗಲಿದೆ. ಆದ್ದರಿಂದ ಯೋಜನೆಯ ಕಾರ್ಯಗತಗೊಳಿಸುವಿಕೆಯನ್ನು ತುರ್ತು ಆದ್ಯತೆಯೊಂದಿಗೆ ಮುಂದುವರಿಸಲು ಮಾನ್ಯ ಸಂಸದರು ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಡಾ. ಮಂಜುನಾಥ್ ರವರು ರಸ್ತೆ ಸಾರಿಗೆ ಮತ್ತು ಮಾನ್ಯ ಹೆದ್ದಾರಿ ಸಚಿವಾಲಯ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳ ಕಚೇರಿಗೆ ಅಗತ್ಯ ಅನುಮೋದನೆಗಳನ್ನು ವೇಗಗೊಳಿಸಿ ರೈತರಿಗೆ ನ್ಯಾಯಸಮ್ಮತ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು.

ಈ ಯೋಜನೆ ನನ್ನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಗಡಿ, ರಾಮನಗರ, ಆನೆಕಲ್ ಹಾಗೂ ಹಾರೋಹಳ್ಳಿ ಭಾಗವನ್ನು ಒಳಗೊಂಡಿದ್ದು, ಸಾವಿರಾರು ಕುಟುಂಬಗಳು ನೇರವಾಗಿ ಪ್ರಭಾವಿತರಾಗಿರುವುದರಿಂದ, ರೈತರಿಗೆ ನ್ಯಾಯ ನೀಡುವುದು ಸರ್ಕಾರದ ಕರ್ತವ್ಯ ಎಂದು ಮಾನ್ಯ ಸಂಸದರು ಹೇಳಿದರು. ಹಲವು ವರ್ಷಗಳಿಂದ ಬಾಕಿ ಉಳಿದಿರುವ ಈ ವಿಷಯವನ್ನು ತಕ್ಷಣ ಬಗೆಹರಿಸಿ, ರೈತರಿಗೆ ಸಮರ್ಪಕ ಪರಿಹಾರವನ್ನು ತ್ವರಿತವಾಗಿ ನೀಡುವಂತೆ ಮಾನ್ಯ ಸಂಸದರಾದ ಪ್ರೊ. ಡಾ. ಸಿ.ಎನ್. ಮಂಜುನಾಥ್ ರವರು ವಿನಂತಿಸಿದರು.

- Advertisement -

Latest Posts

Don't Miss