Thursday, December 4, 2025

Latest Posts

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಭಾಷಣ ಬಿಗಿದವರೆಲ್ಲಾ ಎಲ್ಲಿ ಎಂದು ಸಚಿವ ಗುಂಡೂರಾವ್ ಪ್ರಶ್ನೆ

- Advertisement -

Political News: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿದ್ದು, 1 ಡಾಲರ್ ಬೆಲೆ 90 ರೂಪಾಯಿ ಆಗಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ದಿನೇಶ್ ಗುಂಡೂರಾವ್, ಭಾಷಣ ಬಿಗಿದವರೆಲ್ಲಾ ಎಲ್ಲಿ ಹೋದರೂ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಮೋದಿಯವರ ಆಡಳಿತದಲ್ಲಿ ಭಾರತದ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಈಗ ಒಂದು ಡಾಲರ್‌ನ ಬೆಲೆ 90 ರೂಪಾಯಿ. 11 ವರ್ಷಗಳ ಹಿಂದೆ ಮೋದಿ ಅಧಿಕಾರಕ್ಕೆ ಬಂದರೆ 1 ರೂಪಾಯಿಗೆ 50 ಡಾಲರ್ ಬೆಲೆ ಬರುತ್ತದೆ‌ ಎಂದು ಬಿಜೆಪಿಯ ಕೆಲ ನಾಯಕರು ಭಾಷಣ ಬಿಗಿಯುತ್ತಿದ್ದರು. ಈಗ ಅವರೆಲ್ಲಾ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ.? ಎಂದು ಗುಂಡೂರಾವ್ ಎಕ್ಸ್ ಖಾತೆ ಮೂಲಕ ಪ್ರಶ್ನಿಸಿದ್ದಾರೆ.

ಮೋದಿ ಮತ್ತು ಅವರ ಅಂಧಭಕ್ತರು ನಮ್ಮ ಆಡಳಿತದಲ್ಲಿ ಭಾರತ ಸೂಪರ್ ಪವರ್ ಆಗಿದೆ, ಭಾರತ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕವಾಗಿ ಕುಸಿದಿರುವುದು ದೇಶ ದಿವಾಳಿಯಾಗುವ ಸಂಕೇತವಾಗಿದೆ. ಮೋದಿಯವರು ಇದಕ್ಕೆ ಉತ್ತರ ನೀಡಿ ಅಥವ ಎಂದಿನಂತೆ ಯಾರೂ ಅವರನ್ನ ಪ್ರಷ್ನೆ ಮಾಡುವಹಾಗಿಲ್ಲವೇ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

- Advertisement -

Latest Posts

Don't Miss