Political News: ಕೆಲ ದಿನಗಳ ಹಿಂದೆ ಸಿಎಂ ಮತ್ತು ಡಿಸಿಎಂ ಸೇರಿ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿದ್ದರು. ಈ ವೇಳೆ ಡಿಸಿಎಂ ಅವರು ಲಕ್ಷ ಲಕ್ಷ ಬೆಲೆ ಬಾಳುವ ವಾಚ್ ಧರಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಕರಾರು ತೆಗೆದಿದ್ದರು. ಮಾನ್ಯ ಡಿಸಿಎಂ ಸಾಹೇಬರೇ, ನೀವೇ ಹೇಳಿಕೊಂಡಂತೆ ನಿಮ್ಮ ಮಣಿಕಟ್ಟಿನಲ್ಲಿ ಮಿಂಚುತ್ತಿರುವ “ಕಾರ್ಟಿಯರ್” ವಾಚ್ — 7–8 ವರ್ಷ ಹಳೆಯದು! ಚುನಾವಣಾ ಅಫಿಡವಿಟ್‌ನಲ್ಲಿ ಅದನ್ನು ಘೋಷಿಸಿದ್ದೇನೆ ಎಂದು ಕೂಡ ಹೇಳಿದ್ದೀರಿ. ಆದರೆ, ಪ್ರಶ್ನೆ ಏನೆಂದರೆ… ನಿಮ್ಮ 2018 ಮತ್ತು 2023ರ ಚುನಾವಣಾ ಅಫಿಡವಿಟ್‌ಗಳಲ್ಲಿ ಈ “ಕಾರ್ಟಿಯರ್” ವಾಚ್ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ! ದುಬಾರಿ ಬೆಲೆಯ ರೋಲೆಕ್ಸ್ ಮತ್ತು ಹುಬ್ಲೋಟ್ ವಾಚ್‌ಗಳನ್ನು ಮಾತ್ರ ನೀವು ಘೋಷಿಸಿದ್ದೀರಿ. ಹಾಗಾದರೆ… ಅಫಿಡವಿಟ್‌ಗೆ ಮರೆತು, ಮಣಿಕಟ್ಟಿಗೆ ಮಾತ್ರ ನೆನಪಾದ ಈ ವಾಚ್ ಸಡನ್ ಆಗಿ ಪ್ರತ್ಯಕ್ಷವಾದದ್ದಾದರೂ ಹೇಗೆ? ಎಂದು ಛಲವಾದಿ ಪ್ರಶ್ನಿಸಿದ್ದರು.
ಇದೀಗ ಡಿಸಿಎಂ ಅವರು ಅಫಿಡವಿಟ್ ಸಮೇತರಾಗಿ, ಇದಕ್ಕೆ ಉತ್ತರಿಸಿದ್ದಾರೆ. ಮಿಸ್ಟರ್ ನಾರಾಯಣಸ್ವಾಮಿ..,ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ!
ನಾನು ಪಾರದರ್ಶಕ ವ್ಯಕ್ತಿ. ಏನನ್ನೂ ಮುಚ್ಚಿಟ್ಟುಕೊಳ್ಳಬಾರದು ಅಂತಲೇ ನಿಜ ಹೇಳಿದ್ದೇನೆ. ನನಗೆ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ನಮಗೆ ಇಷ್ಟವಾದ ವಾಚ್ ಕಟ್ಟಿಕೊಳ್ಳುವ ಯೋಗ್ಯತೆ ಇಲ್ಲವೇ? ಹಕ್ಕು ಇಲ್ಲವೇ..? “ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ” ಆಡಬೇಡಿ. ನಿಮಗಿರೋ ಸಾಂವಿಧಾನಿಕ ಅಧಿಕಾರ, ಜವಾಬ್ದಾರಿಯನ್ನು ವಿವೇಕದಿಂದ ನಿರ್ವಹಿಸಿ. ಅವಿವೇಕಿಯಂತೆ ಆಡಬೇಡಿ..! ಬೇಕಿದ್ದರೆ ಲೋಕಾಯುಕ್ತ ಕಚೇರಿಗೆ ಹೋಗಿ ನನ್ನ ಅಫಿಡವಿಟ್ ಚೆಕ್ ಮಾಡಿಕೊಳ್ಳಿ ಎಂದು ಡಿಸಿಎಂ ಹೇಳಿದ್ದಾರೆ.

