Friday, December 5, 2025

Latest Posts

Tumakuru News: ಜಿ.ಪರಮೇಶ್ವರ್ ಅವರು ಸಿಎಂ ಆಗಲೆಂದು ಅಧಿಕಾರಿಯಿಂದ ಹೋಮ, ಪೂಜೆ

- Advertisement -

Tumakuru News: ತುಮಕೂರು: ಈಗಾಗಲೇ ರಾಜ್ಯದಲ್ಲಿ ದಲಿತ ಸಿಎಂ ಕೂಗು ಜೋರಾಗಿದ್ದು, ತುಮಕೂರಿನಲ್ಲಿ ಕೆಲ ದಿನಗಳ ಹಿಂದೆ, ಪರಮೇಶ್ವರ್ ಅವರೇ ಸಿಎಂ ಆಗಬೇಕು ಎಂದು ದಲಿತ ಸಂಘಟನೆಯವರು ರಕ್ತದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆದಿದ್ದರು.

ಇದೀಗ ಪರಮೇಶ್ವರ್ ಅವರು ಸಿಎಂ ಆಗಲೆಂದು ವಿಶೇಖ ಹೋಮ, ಪೂಜೆ ಎಲ್ಲವನ್ನೂ ಮಾಡಿಸಲಾಗಿದೆ. ತುಮಕೂರು ತಾಲ್ಲೂಕಿನ ಮಿಂಚಕಲ್‌ ಬೆಟ್ಟದಲ್ಲಿರುವ ಆಂಜನೆಯ ಸ್ವಾಮಿ ಹಾಗೂ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಈ ಪೂಜೆ ಮಾಡಲಾಗಿದೆ.

ತುಮಕೂರು‌ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಡಾ.ನಾಗಣ್ಣ ಅವರು ಪೂಜೆ ಮಾಡಿ, ಪರಮೇಶ್ವರ್ ಅವರೇ ಸಿಎಂ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

- Advertisement -

Latest Posts

Don't Miss