ಪ್ರೊಟೀನ್ ಪೌಡರ್ ಡೇಂಜರ್? ಮಕ್ಕಳಾಗಲ್ವಾ?: Raghu Ramappa Podcast

Sandalwood: ಕಲಾವಿದ ಮತ್ತು ಜಿಮ್ ಟ್ರೇನರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪ್ರೋಟೀನ್ ಪೌಡರ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗತ್ತಾ ಅನ್ನೋ ಬಗ್ಗೆ ಮಾತನಾಡಿದ್ದಾರೆ.

ರಘು ರಾಮಪ್ಪ ಹೇಳುವ ಪ್ರಕಾರ, ಇದು ಭ್ರಮೆ. ಪ್ರೋಟೀನ್ ಪೌಡರ್ ಅಂದ್ರೆ, ಹಾಲಿನಿಂದ ಪನೀರ್ ತೆಗೆದು, ಅದನ್ನು ಪೌಡರ್ ಆಗಿ ಬಳಸುವುದೇ ಪ್ರೋಟೀನ್ ಪೌಡರ್. ಆದರೆ ಹಲವರಿಗೆ ಈ ಬಗ್ಗೆ ತಪ್ಪು ತಿಳುವಳಿಕೆ ಇದೆ. ಪೌಡರ್ ಸೇವನೆ ಮಾಡಿದ್ರೆ, ಅವರು ನಿಜವಾಗಿಯೂ ಆರೋಗ್ಯವಂತನಲ್ಲ ಅಂತಾನೇ ಹಲವರು ತಿಳಿಯುತ್ತಾರೆ. ಆದರೆ ಹಾಗೇನಿಲ್ಲ. ಅದು ಕೂಡ ಹಾಲಿನ ಸೇವನೆಗೆ ಸಮ ಅಂತಾರೆ ರಘು ರಾಮಪ್ಪ.

ಆದರೆ ನೀವು ಪೌಡರ್ ಖರೀದಿಸುವಾಗ ಕ್ವಾಲಿಟಿ ಹೇಗಿದೆ ಅಂತಾ ತಿಳಿದು ಖರೀದಿಸಬೇಕು. ಇನ್ನು ದೇಹದಲ್ಲಿ ಬಿ 12 ಇಲ್ಲದಿದ್ದಾಗ, ವಿಟಾಮಿನ್ ಡಿ ಇರದಿದ್ದಾಗ, ಅದನ್ನು ಆಹಾರದ ಮೂಲಕ ನಾವು ಪಡೆಯಬಹುದು. ಆದರೆ ಕೆಲವರು ಸ್ಟೇರಾಯ್ಡ್ ಅಂದ್ರೆ ಸಪ್ಲಿಮೆಂಟ್‌ನ್ನು ಇಂಜೆಕ್ಟ್ ಮಾಡಿ ಅಥವಾ ಮಾತ್ರೆ ಸೇವನೆ ಮುಖಾಂತರ ಸೇವಿಸಲಾಗುತ್ತದೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author