Sandalwood: ಬಾಡಿ ಬಿಲ್ಡೀಂಗ್ ಬಗ್ಗೆ ಮಾತನಾಡಿರುವ ಕಲಾವಿದ ರಘು ರಾಮಪ್ಪ ಅವರು, ಎಲ್ಲೇ ಹೋದರೂ ನಮ್ಮ ಹಣದಲ್ಲಿ ನಾವು ಧ್ವಜ ಹಾರಿಸಿ ಬರಬೇಕು ಎಂದಿದ್ದಾರೆ.
ರಘು ರಾಮಪ್ಪ ಹೇಳುವುದೇನೆಂದರೆ, ಬಾಡಿ ಬಿಲ್ದೀಂಗ್ ಮಾಡೋದು ತುಂಬಾ ಕಷ್ಟದ ಕೆಲಸ. ಕೆಲವೇ ದಿನಗಳಲ್ಲಿ ಬಾಡಿ ಬಿಲ್ಡ್ ಮಾಡಲಾಗುವುದಿಲ್ಲ. ಯಾಕಂದ್ರೆ ಬಾಡಿ ಬಿಲ್ಡ್ ಮಾಡಬೇಕು ಅಂದ್ರೆ, ನಾವು ಅದೇ ರೀತಿ ಡಯಟ್ ಮಾಡಬೇಕು. ಉತ್ತಮ ಆಹಾರ ಸೇವಿಸಬೇಕು. 1 ದಿನ ಚೀಟ್ ಮೀಲ್ ತಿಂದ್ರೆ, ಎಲ್ಲಾ ಫಿನಿಷ್ ಅನ್ನೋ ರೀತಿಯಾಗಿಬಿಡತ್ತೆ. ಹಾಗಾಗಿ ನಾವು ಆಹಾರ ಸೇವನೆ ಸಮಯದಲ್ಲೂ ಜಾಗುರೂಕರಾಗಿರಬೇಕು ಅಂತಾರೆ ರಘು ರಾಮಪ್ಪ.
ಇನ್ನು ಬೇರೆ ಬೇರೆ ದೇಶಗಳಿಗೆ ಹೋಗಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅಂದ್ರೆ ನಮ್ಮ ಸ್ವಂತ ಹಣದಲ್ಲೇ ಹೋಗಬೇಕು. ಹಾಗೆ ಹೋಗಿ ಧ್ವಜ ಹಾರಿಸಬೇಕು.ನಮಗೆ ಯಾರೂ ಹಣ ನೀಡುವುದಿಲ್ಲ. ಸರ್ಕಾರ ನಮ್ಮನ್ನು ಸ್ಪರ್ಧೆಗೆ ಕಳಿಸುವುದಿಲ್ಲ. ನಮ್ಮ ದುಡ್ಡಲ್ಲೇ ನಾವು ಬೇರೆ ಬೇರೆ ದೇಶಕ್ಕೆ ಹೋಗಿ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಅಂತಾರೆ ರಘು ರಾಮಪ್ಪ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




