Bigg Boss Kannada: ಈ ಬಾರಿ ಬಿಗ್‌ಬಾಸ್‌ನಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ.
ಅಶ್ವಿನಿ ಜತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಜಾನ್ವಿ, ನಾವು ಜತೆಗಿದ್ದರೂ ನಾವು ನಾಮಿನೇಟ್ ಮಾಡುವ ವ್ಯಕ್ತಿ ಬೇರೆ ಬೇರೆಯವರಾಗಿರುತ್ತಿದ್ದರು. ನನಗಾಗದವರನ್ನು ಅವರು ಮಾತನಾಡಿಸುತ್ತಿದ್ದರು. ಅವರಿಗಾಗದವರನ್ನು ನಾನು ಮಾತನಾಡಿಸುತ್ತಿದ್ದೆ. ಮಧ್ಯದಲ್ಲಿ ಜಗಳವಾಯ್ತು. ಮತ್ತೆ ನಾವು ಜತೆಯಾದ್ವಿ. ಹೀಗೆ ನಮ್ಮ ಗೆಳೆತನ ಸಾಗಿತ್ತು ಎಂದು ಅಶ್ವಿನಿ ಜತೆಗಿನ ಗೆಳೆತನದ ಬಗ್ಗೆ ಜಾನ್ವಿ ಮಾತನಾಡಿದ್ದಾರೆ.
ಇನ್ನು ಗಿಲ್ಲಿ ಬಗ್ಗೆ ಮಾತನಾಡಿರುವ ಜಾನ್ವಿ, ಗಿಲ್ಲಿಗೆ ಹೆಚ್ಚು ಪ್ರಸಿದ್ಧಿ ಇದೆ ಎಂದು ತಿಳಿದು ನಾವು ಅವನ ಜತೆಗೇ ಹೆಚ್ಚು ಇದ್ದರೆ ಅದು ಡ್ರಾಮಾ ಎನ್ನಿಸುತ್ತದೆ. ಪ್ರಚಾರಕ್ಕಾಗಿ ನಾವು ಮಾಡುವ ತಂತ್ರ ಅಂತಾ ಅನ್ನಿಸುತ್ತೆ ಅಂತಾ ಜಾನ್ವಿ ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

