- Advertisement -
Bigg Boss Kannada: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಜಾನ್ವಿ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ಅಶ್ವಿನಿ ಬಗ್ಗೆ ಮಾತನಾಡಿರುವ ಜಾನ್ವಿ, ಇದ್ದದ್ದು ಇದ್ದ ಹಾಗೆ ಇದ್ದಾರೆ. ಆಚೆ ವಿಲನ್ ರೀತಿ ಕಾಣುತ್ತಾರೆ. ಆದರೆ ಯಾರೂ ನೋಡದ ಅವರನ್ನು ನಾನು ನೋಡಿದ್ದೇನೆ. ನನಗೆ ಬಿಗ್‌ಬಾಸ್ ಮನೆಯಲ್ಲಿ ಸಿಕ್ಕ ಗೆಳತಿ ಅಶ್ವಿನಿ ಎಂದಿದ್ದಾರೆ ಜಾನ್ವಿ.
ಆದರೆ ನಿಮ್ಮ ಮತ್ತು ಅಶ್ವಿನಿ ಗೆಳೆತನವಿದ್ದಾಗ ಜನ ನಿಮ್ಮನ್ನು ವಿರೋಧಿಸುತ್ತಿದ್ದರು. ಆದರೆ ನೀವಿಬ್ಬರು ಬೇರೆಯಾದಾಗ ಜನ ನಿಮ್ಮನ್ನು ಬೆಂಬಲಿಸಿದರು. ಈ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ಉತ್ತರಿಸಿದ ಜಾನ್ವಿ, ನಾವು ನಾವಾಗಿದ್ದು ಆಡಬೇಕಾಗುತ್ತದೆ ಎಂದಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.
- Advertisement -

