Bigg Boss Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಜಾನ್ವಿ ಅವರು, ಗಿಲ್ಲಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.
ಗಿಲ್ಲಿ ಮನೆಯವರನ್ನೆಲ್ಲ ತುಂಬಾ ನಗಿಸುತ್ತಿದ್ದ. ಅವನು ಯಾವಾಗಲೂ ತಮಾಷೆ ಮಾಡುತ್ತಿದ್ದ. ಹಾಗಾಗಿ ಅವನಲ್ಲಿ ಬರೀ ಕಾಮಿಡಿ ಬಿಟ್ಟು ಬೇರೆ ಏನನ್ನು ನೋಡಿಲ್ಲ ಎಂದು ಹೇಳಿದ್ದಾರೆ ಜಾನ್ವಿ.
ಆದರೆ ಆಚೆ ಎಲ್ಲರೂ ಗಿಲ್ಲಿನೇ ಬಿಗ್‌ಬಾಸ್ ಗೆಲ್ಲೋದು ಎಂದು ಹೇಳುತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಜಾನ್ವಿ, ಗಿಲ್ಲಿ ಯಾವ ಟೀಂನಲ್ಲಿರುತ್ತಾನೋ ಅಲ್ಲಿ ಸೋಲು ಫಿಕ್ಸ್ ಅಂತಾ ನಾನು ರೇಗಿಸುತ್ತಿದ್ದೆ. ಏಕೆಂದರೆ ಅವರು ಟಾಸ್ಕ್ ಹಾಳು ಮಾಡುತ್ತಿದ್ದ. ಕೆಲಸವನ್ನೇ ಹಾಳು ಮಾಡುತ್ತಾನೆ. ನಾನು ಹೇಳಿದ ರೀತಿ ಎಲ್ಲ ಟಾಸ್ಕ್ ನಲ್ಲೂ ಗಿಲ್ಲಿ ಟೀಂ ಸೋತು ಹೋಗಿದೆ. ಅಂಥ ವ್ಯಕ್ತಿ ಗಿಲ್ಲಿ ಎಂದಿದ್ದಾರೆ ಜಾನ್ವಿ.
ಇನ್ನು ಗಿಲ್ಲಿ ಬಗ್ಗೆ ಉತ್ತಮ ಹೇಳೋದಾದ್ರೆ ಏನು ಹೇಳುತ್ತೀರಿ ಎಂದು ಕೇಳಿದ್ದಕ್ಕೆ, ಕಾವ್ಯಾ ಹೇಳುತ್ತಿದ್ದಳು, ನಾನು ಈ ಮುಂಚೆ ಬೇರೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೆ. ಅಲ್ಲಿ ಗಿಲ್ಲಿ ವೇದಿಕೆ ಮೇಲೆ ಮಾತ್ರ ಕಾಮಿಡಿ ಮಾಡುತ್ತಿದ್ದ. ಆಮೇಲೆ ತನ್ನ ಕೆಲಸ ಆಯ್ತು ತಾನಾಯ್ತು ಅಂತಾ ಇರುತ್ತಿದ್ದ ಅಂತಾ ಕಾವ್ಯ ಹೇಳಿದ್ದಳು. ಹಾಗಾಗಿ ಆತ ರಿಯಾಲಿಟಿ ಶೋಗಾಗಿ ಮಾತ್ರ ಆ ರೀತಿ ಆಡುತ್ತಿದ್ದಾನೆ. ಆಚೆ ಆತ ಆ ರೀತಿ ಇರುತ್ತಾನೆಂದು ಹೇಳಲು ಆಗಲ್ಲ ಎಂದಿದ್ದಾರೆ ಜಾನ್ವಿ.

