Friday, December 5, 2025

Latest Posts

Mandya: ಮಂಡ್ಯ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

- Advertisement -

Mandya News: ಮಂಡ್ಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಂಶೋಧನಾ ಕೇಂದ್ರ ಇತ್ತೆ ಹೊರತು ಕೃಷಿಯ ಸಮಗ್ರ ಅಧ್ಯಯನಕ್ಕಾಗಿ ಒಂದು ವಿವಿ ಆಗಬೇಕು ಎಂಬ ಈ ಭಾಗದ ಜನರ ಬಹು ದಿನಗಳ ಬೇಡಿಕೆ ಕಡೆಗೂ ನೆರವೇರಿದೆ. ರಾಜ್ಯ ಸರ್ಕಾರ ಮಂಡ್ಯದಲ್ಲಿದ್ದ ಕೃಷಿ ಸಂಶೋಧನಾ ಕೇಂದ್ರವನ್ನೇ ಕೃಷಿ ವಿವಿಯಾಗಿ ಮಾರ್ಪಾಡು ಮಾಡಿದ್ದು ಕೃಷಿ ವಿವಿ ಆದ ಮೊದಲ ಬಾರಿಗೆ ಮೂರು ದಿನಗಳ ಕೃಷಿ ಮೇಳವನ್ನ ಆಯೋಜನೆ ಮಾಡಿತ್ತು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನ ಉದ್ಘಾಟಿಸಿ ಮೇಳವನ್ನ ಕಣ್ತುಂಬಿಕೊಂಡರು.

ಮಂಡ್ಯದ ವಿಸಿ ಫಾರ್ಮ್ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವ ಕೃಷಿ ಸಂಶೋಧನಾ ಕೇಂದ್ರ ಇಡೀ ವಿಶ್ವದಲ್ಲಿ ಗಮನ ಸೆಳೆಯುವ ಕೇಂದ್ರವಾಗಿತ್ತು. ಹಲವು ದಶಕಗಳಿಂದ ಇಲ್ಲಿ ಕಲಿತಿರುವ ಅದೆಷ್ಟೊ ಕೃಷಿ ವಿಜ್ಞಾನಿಗಳು ದೇಶದ ಮೂಲೆ ಮೂಲೆಯಲ್ಲಷ್ಟೆ ಅಲ್ಲದೇ ದೇಶದ ಹೊರಗೂ ತಮ್ಮ ಛಾಪು ಮೂಡಿಸಿದ್ದಾರೆ.

ಅಂತಹ ಖ್ಯಾತಿಯನ್ನ ಪಡೆದಿರೊ ಈ ಕೃಷಿ ಸಂಶೋಧನಾ ಕೇಂದ್ರ ವಿವಿ ಆಗಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೇ ಕೇಳಿಬಂದಿತ್ತು, ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕಡೆಗೂ ಆ ಬೇಡಿಕೆಯನ್ನ‌‌ ಈಡೇರಿಸಿದ್ದು ಈ ವರ್ಷದಿಂದಲೇ ಕೃಷಿ ವಿವಿ ಕಾರ್ಯರಂಭ ಮಾಡಿದೆ.

ಅದರ ಮೊದಲ ಕಾರ್ಯಕ್ರಮ ಎಂಬಂತೆ ಇಂದಿನಿಂದ ಮೂರು ದಿನಗಳ ಕಾಲ ಕೃಷಿ ಮೇಳಕ್ಕೆ ಚಾಲನೆ ನೀಡಲಾಗಿದೆ. ಈ ಮೇಳವನ್ನ ಪ್ರಮುಖವಾಗಿ ಮಂಡ್ಯ, ಮಡಿಕೇರಿ, ಚಾಮರಾಜನಗರ, ಹಾಸನ, ರಾಮನಗರ‌ ಜಿಲ್ಲೆಗಳ ರೈತರನ್ನ ಗಮನದಲ್ಲಿರಿಸಿಕೊಂಡು ಆಯೋಜನೆ ಮಾಡಲಾಗಿದ್ದು ಇಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪ ಬೆಳಗಿಸೊ ಮೂಲಕ ಉದ್ಘಾಟಿಸಿದರು.

ಇಂದು ಬೆಳಗೆ ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಆಗಮಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಹವಮಾನ ವೈಪರಿತ್ಯದಿಂದಾಗಿ ಅವರು ರಸ್ತೆ ಮೂಲಕವೇ ಆಗಮಿಸಿದರು, ವಿವಿಯ ಆವರಣದಲ್ಲೇ ಬೃಹತ್ ವೇದಿಕೆಯನ್ನ ಸಿದ್ದಪಡಿಸಲಾಗಿತ್ತು, ಮಧ್ಯಾಹ್ನ 1.30 ರ ವೇಳೆಗೆ ಆಗಮಿಸಿದ ಸಿ ಎಂ ಸಿದ್ದರಾಮಯ್ಯ ದೀಪ ಬೆಳಗೊ ಮೂಲಕ ಮೂರು ದಿನಗಳ ಕೃಷಿ ಮೇಳಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಇಲ್ಲಿ ಕೃಷಿ ವಿವಿ ಆಗಬೇಕು ಎಂಬ ಮಾತುಗಳು ಕೇಳಿ ಬಂದಾಗ ನಾನು ಒಪ್ಪಿಗೆ ಸೂಚಿಸಿದೆ.ಆದ್ರೆ ನಮ್ಮ ಕ್ಯಾಬಿನೆಟ್ ನಲ್ಲಿ‌ಕೆಲವರು ಬೇಡ ಎಂದು ಅಪಸ್ವರ ತೆಗೆದರು‌ ಆದ್ರೆ ನಾನು ಇಲ್ಲ‌ ಇಲ್ಲಿ ಕೃಷಿ ವಿವಿ ಆಗಲೇಬೇಕು ಎಂದು ಹೇಳಿ ವಿವಿ ಮಾಡಿದ್ದು ಆಯ್ತು ಐದು ಜಿಲ್ಲೆಗಳ ರೈತರಿಗೆ ಇದು ಸದುಪಯೋಗ ಆಗಬೇಕು ಎಂದರು.

ಇದಲ್ಲದೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಫಾರಂ ಆವರಣದಲ್ಲಿ ಇಂದಿನಿಂದ ಡಿಸೆಂಬರದ 7 ರವರೆಗೆ ಅಂದ್ರೆ ಮೂರು ದಿನಗಳ ವರೆಗೆ ಆಯೋಜಿಸಲಾಗಿರುವ ಕೃಷಿ ಮೇಳ 2025 ನ್ನ ವೀಕ್ಷಿಸಲು ಮಂಡ್ಯ ಸೇರಿದಂತೆ ಐದು ಜಿಲ್ಲೆಗಳಿಂದ ಐದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಈವರೆಗೆ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದಿಂದ ಭತ್ತದಲ್ಲಿ 45 ತಳಿಗಳು, 3 ಹೈಬ್ರೀಡ್ ಗಳು, 50 ತಾಂತ್ರಿಕತೆಗಳು, ರಾಗಿಯಲ್ಲಿ 37 ತಳಿಗಳು, ಕಬ್ಬಿನಲ್ಲಿ 17 ತಳಿಗಳು ಮತ್ತು 20 ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ ನಾಲ್ಕು ತಳಿಗಳು ಮೇವಿನ ಬೆಳೆಗಳಲ್ಲಿ ನಾಲ್ಕು ತಳಿಗಳು, ಸೂರ್ಯಕಾಂತಿ ಸಂಕಿರಣ ತಿಳಿ (ಕೆ.ಬಿ.ಎಸ್.ಹೆಚ್-88) ಚಾಮರಾಜನಗರ ಕಪ್ಪು ಅರಿಶಿಣದ ತಳಿ, ಅರಿಶಿಣದ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದ್ದು ಮೇಳ ವೀಕ್ಷಿಸಲು ಬರುವ ರೈತರಿಗೆ ಇದರ ಬಗೆಗೆ ಮಾಹಿತಿ ನೀಡಲಾಗ್ತಿದೆ.

ಜೊತೆಗೆ ರೈತರು ಜೈವಿಕ ಗೊಬ್ಬರಕ್ಕೆ ಹೆಚ್ಚಿನ ಹೊತ್ತು ನೀಡಬೇಕು ಜೈವಿಕ ಗೊಬ್ಬರ ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ರೈತರು ಬಹು ಬೆಳೆ ಕೃಷಿಯನ್ನು ಹೆಚ್ಚು ಮಾಡಬೇಕು. ಬಹುಬೆಳೆ ಕೃಷಿಯಲ್ಲಿ ಶ್ರಮ ಮತ್ತು ಜವಾಬ್ದಾರಿ ಎರಡು ಹೆಚ್ಚಿರುತ್ತದೆ ಜೊತೆಗೆ ಆದಾಯವು ಸಹ ಹೆಚ್ಚು ಲಭಿಸುತ್ತದೆ ಎಂಬುದರ ಕುರಿತು ಅರಿವು ಮೂಡಿಸಲಾಗ್ತಿದೆ.

ಜೊತೆಗೆ ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನು ಕೃಷಿ, ಸಸ್ಯಕ್ಷೇತ್ರ ನಿರ್ವಹಣೆಯಲ್ಲಿ ಪ್ರಮುಖವಾಗಿ ದೇಸಿ ಮತ್ತು ವಿದೇಶಿ ತಳಿಗಳ ಬಗೆಗೂ ಮಾಹಿತಿ ನೀಡಲಾಗ್ತಿದೆ.

ಇನ್ನ ಸಿ ಎಂ ಜೊತೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಕೈಪಿಡಿ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಚಲುವರಾಯಸ್ವಾಮಿ ಮಂಡ್ಯ, ಮೈಸೂರು, ರಾಮನಗರ ಕೊಡಗು ಭಾಗದ ರೈತರನ್ನ ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ಕೃಷಿ ವಿವಿ ಸ್ಥಾಪನೆ ಮಾಡಲಾಗಿದ್ದು ಇದು ರಾಜ್ಯದಲ್ಲಿ ಆರಂಭವಾಗಿರೊ ಐದನೇ ಕೃಷಿ ವಿವಿಯಾಗಿದೆ ಹಾಗೂ ಕಡಿಮೆ ಅವಧಿಯಲ್ಲೇ ಆರಂಭವಾಗಿ ಕಾರ್ಯನಿರ್ವಹಿಸ್ತಿರೊ ಕೃಷಿ ವಿವಿ ಎಂಬ ಖ್ಯಾತಿಗೂ ಪಾತ್ರವಾಗಿದೆ ಎಂದರು.

ಒಟ್ಟಾರೆ ಇದು ವಿವಿ ಆಗುವ ಮೊದಲೇ ಕೃಷಿ ಸಂಶೋಧನಾ ಕೇಂದ್ರವಾಗಿ ಹಲವು ತಳಿಗಳನ್ನ ಅಭಿವೃದ್ದಿ ಪಡಿಸಿ ರಾಷ್ಟ್ರದ ಗಮನ ಸೆಳೆದಿತ್ತು ಇದೀಗ ಕೃಷಿ ವಿವಿಯಾಗಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರೊ ಈ ಕೇಂದ್ರದಿಂದ ಇನ್ನಷ್ಟು ಹೊಸ ಹೊಸ ಆವಿಸ್ಕಾರಗಳು ನಡೆಯಲಿ‌ ಅದರ ಫಲ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲಾ ರೈತರಿಗೂ ಸಿಗಲಿ ಹಾಗೂ ಮೂರು ದಿನಗಳ ಕಾಲ ನಡೆಯಲಿರೊ ಈ ಕೃಷಿ ಮೇಳ ಯಶಸ್ವಿಯಾಗಲಿ ಎಂಬುದೇ ನಮ್ಮ ಹಾರೈಕೆ

- Advertisement -

Latest Posts

Don't Miss