Friday, December 5, 2025

Latest Posts

ರಕ್ಷಿತಾ ಮೇಲೆ ಧ್ರುವಂತ್‌ ಟಾರ್ಗೆಟ್‌ : BB ಫ್ಯಾನ್ಸ್‌ ಫುಲ್‌ ON ಫೈರ್!

- Advertisement -

ಬಿಗ್ ಬಾಸ್‌ನಲ್ಲಿ ನಡೆದ ಸ್ವಿಮ್ಮಿಂಗ್‌ ಪೂಲ್ ಚೆಂಡು ಸಂಗ್ರಹ ಟಾಸ್ಕ್ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಟಾಸ್ಕ್ ವೇಳೆ ಧ್ರುವಂತ್ ನ್ಯಾಯಸಮ್ಮತವಾಗಿ ಉಸ್ತುವಾರಿ ಮಾಡಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿ–ಕಾವ್ಯ, ಅಭಿ–ಚೈತ್ರಾ, ಅಶ್ವಿನಿ–ರಘು ಜೋಡಿಯವರು ಚೆಂಡುಗಳನ್ನು ಕೈಯಲ್ಲಿ ಹಿಡಿದು ಕೋಲಿನ ಹತ್ತಿರಕ್ಕೆ ತರಿದರೂ ಧ್ರುವಂತ್ ಯಾವುದೇ ತಡೆಯನ್ನು ಹಾಕಿರಲಿಲ್ಲ. ಆದರೆ ಇದೇ ನಿಯಮ ಉಲ್ಲಂಘನೆ ರಕ್ಷಿತಾ ಮತ್ತು ಮಾಳು ಎದುರು ನಡೆದಾಗ, ಧ್ರುವಂತ್ ಜೋರಾಗಿ ಗದರಿಸಿ ಅವರ ಆಟವನ್ನು 10 ಸೆಕೆಂಡ್ ನಿಲ್ಲಿಸಿದರು.

ಪ್ರೋಮೋ ರಿಲೀಸ್ ಆದಾಗ ರಕ್ಷಿತಾ ತಪ್ಪೇನೋ ಮಾಡಿದ್ದಾರೆ ಎಂಬ ಊಹೆ ಜನರಲ್ಲಿ ಮೂಡಿತ್ತು. ಆದರೆ ಪೂರ್ಣ ಎಪಿಸೋಡ್ ಪ್ರಸಾರವಾದಾಗ ಧ್ರುವಂತ್ ಪಕ್ಷಪಾತ ಮಾಡಿದದ್ದು ಸ್ಪಷ್ಟವಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ವಿಶೇಷವಾಗಿ, ಗಿಲ್ಲಿ–ಕಾವ್ಯ ಹಲವು ಬಾರಿ ಚೆಂಡುಗಳನ್ನು ಕೋಲಿನ ಹತ್ತಿರ ತಂದರೂ ಧ್ರುವಂತ್ ಮೌನವಾಗಿದ್ದದ್ದು ಗಮನಸೆಳೆದಿದೆ. ಇದೇ ವೇಳೆ ನಡೆದ ರಕ್ಷಿತಾ–ಮಾಳು ಪ್ರಕರಣಕ್ಕೆ ಮಾತ್ರ ಗದರಿಕೆಯಾಗಿರುವುದು ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟಿಸಿದೆ. ಇದಕ್ಕೆ ಬೇಸತ್ತ ರಕ್ಷಿತಾ, ನೀರಿನಲ್ಲಿದ್ದ ಕೋಲನ್ನು ಬಾರಿಸಿ ಕೋಪ ಹೊರಹಾಕಿರುವ ದೃಶ್ಯವೂ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುವ ನೆಟ್ಟಿಗರು, ರಕ್ಷಿತಾ–ಮಾಳುವನ್ನೇ ಟಾರ್ಗೆಟ್ ಮಾಡಿರುವ ಧ್ರುವಂತ್ ನಡೆ ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ. ಟಾಸ್ಕ್ ಬಳಿಕ ಸೂರಜ್ ಜೊತೆ ಮಾತನಾಡಿದ ರಕ್ಷಿತಾ, “ಇತರರು ತಪ್ಪು ಮಾಡಿದಾಗ ಏನೂ ಹೇಳಲಿಲ್ಲ. ನಾವು ಮಾಡಿದಾಗ ಮಾತ್ರ ಆಟ ನಿಲ್ಲಿಸಿ ಜೋರಾಗಿ ಗದರಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

ಈ ವಾರದ ‘ಕಿಚ್ಚನ ಜೊತೆಯ ಮಾತುಕತೆ’ ಯಲ್ಲಿ ಸುದೀಪ್ ಅವರು ಉಳಿದ ಸ್ಪರ್ಧಿಗಳ ನಿಯಮ ಉಲ್ಲಂಘನೆ ವಿಡಿಯೋಗಳನ್ನು ತೋರಿಸಿ ಧ್ರುವಂತ್ ಅವರಿಗೆ ಕ್ಲಾಸ್ ತೆಗೆದುಕೊಳ್ಳಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇನ್ನು ಕೆಲವು ವಾರಗಳಿಂದಲೇ ರಕ್ಷಿತಾ–ಧ್ರುವಂತ್ ನಡುವೆ ಉದ್ವಿಗ್ನತೆಯಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ವೈಯಕ್ತಿಕ ದ್ವೇಷವೇ ಟಾಸ್ಕ್‌ನಲ್ಲಿ ಆಡಳಿತದ ಮೇಲೆ ಪರಿಣಾಮ ಬೀರಿದೆ ಎಂದು ನೆಟ್ಟಿಗರು ಧ್ರುವಂತ್ ವಿರುದ್ಧ ಗರಂ ಆಗಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss