ಮತ್ತೆ ಬಾಲಬಿಚ್ಚಿದ MES ಮುಖಂಡರು!

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ನ ಪುಂಡಾಟ ಮುಂದುವರಿದೆ. ಚಳಿಗಾಲದ ಅಧಿವೇಶನದ ಹಿನ್ನಲೆಯಲ್ಲಿ ಮಹಾಮೇಳಾವಗೆ ಎಂಇಎಸ್ ಮುಖಂಡರು ಅನುವತಿ ಕೋರಿದ್ದರು. ಆದರೆ ಪೊಲೀಸ್ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಬಂದು ಮಖಂಡರು, ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ. ಈವರೆಗೆ 20ಕ್ಕೂ ಹೆಚ್ಚು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾಜಿ ಶಾಸಕ ಮನೋಹರ್ ಕೀಣೆಕರ್, ರಮಾಕಾಂತ ಕೊಂಡೊಸ್ಕರ್, ಪ್ರಕಾಶ ಮರಗಾಳೆ, ಮಾಲೋಜಿ ಅಷ್ಟೇಕರ್, ಶುಭಂ ಶಳಕೆ ಅವರನ್ನ ವಶ ಪಡಿಸಿಕೊಂಡಿದ್ದಾರೆ. ಪ್ರತಿಭಟನೆ ಹತ್ತಿರದ ಪ್ರದೇಶಗಳಲ್ಲಿ ಟ್ರಾಫಿಕ್ ನಿರ್ವಹಣೆ ಮತ್ತು ಸಾರ್ವಜನಿಕ ಶಾಂತಿಯ ಮೇಲ್ವಿಚಾರಣೆಗೆ ಪೊಲೀಸ್ ಸಿಬ್ಬಂದಿ ತೀವ್ರವಾಗಿ ನಿಯೋಜಿತಗೊಂಡಿದ್ದಾರೆ.

 

About The Author