ಸಿನಿಮಿಯಾ ಸ್ಟೈಲ್‌ ಅಲ್ಲಿ ಕಿಡ್ನ್ಯಾಪ್‌ ಗಂಟೆಗಳಲ್ಲೇ ಅರೋಪಿಗಳು ಅಂದರ್

ಹಣಕ್ಕಾಗಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಣ ಮಾಡಿದ್ದ ಪ್ರಕರಣವನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಭೇದಿಸಿ, ಕಿಡ್ನ್ಯಾಪ್ ಆದ ಕೆಲವೇ ಗಂಟೆಯಲ್ಲೇ ಆರೋಪಿಗಳನ್ನು ಸಿಕ್ಕಿಬಿದ್ದಿಸಿದ್ದಾರೆ. ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ, ವಿಜಯನಗರ ಮೂರನೇ ಹಂತದ ನಿವಾಸಿ ಲೋಕೇಶ್ ಅವರನ್ನು ಟಾಟಾ ಸುಮೋದಲ್ಲಿ ಬಂದ ಐವರು ಅಪಹರಣ ಮಾಡಿದ್ದರು. ಬಳಿಕ ಲೋಕೇಶ್ ಅವರ ಮೊಬೈಲ್‌ನಿಂದಲೇ ಪತ್ನಿಗೆ ಕರೆಮಾಡಿ, ₹30 ಲಕ್ಷ ಹಣವನ್ನು ಬೇಡಿಕೆ ಇಡಲಾಗಿದೆ.

ಘಟನೆಯಿಂದ ಗಾಬರಿಗೊಂಡ ಪತ್ನಿ ತಕ್ಷಣವೇ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ದೊರೆತ ಕೂಡಲೇ ಪೊಲೀಸರು ಅಲರ್ಟ್ ಆಗಿ, ವೇಗದ ಮತ್ತು ಸಿನಿಮೀಯ ಶೈಲಿಯ ಹುಡುಕಾಟ ಆರಂಭಿಸಿದ್ದಾರೆ. ಕೆಲವು ಗಂಟೆಗಳಲ್ಲೇ ಮೈಸೂರು ನಗರದಿಂದ 50 ಕಿ.ಮೀ. ದೂರದಲ್ಲಿ ಆರೋಪಿಗಳನ್ನು ಬಂಧಿಸಿ, ಅಪಹರಣಗೊಂಡ ಲೋಕೇಶ್ ಅವರನ್ನು ಸುರಕ್ಷಿತವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸ್ ತನಿಖೆಯಲ್ಲಿ, ಕಳೆದ 15 ದಿನಗಳಿಂದ ಲೋಕೇಶ್ ಅವರ ಚಲನವಲನವನ್ನು ಆರೋಪಿಗಳು ಫಾಲೋ ಮಾಡುತ್ತಿದ್ದರೆಂಬ ಸಂಗತಿ ಬಹಿರಂಗವಾಗಿದೆ. ಹೆರಿಟೇಜ್ ಕ್ಲಬ್‌ನಿಂದ ಮನೆಗೆ ವಾಪಸ್ಸಾಗುವ ವೇಳೆ ಅಪಹರಣ ಜರುಗಿತ್ತು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author