Sandalwood: ಮಾಜಿ ಬಿಗ್ಬಾಸ್ ಸ್ಪರ್ಧಿಯಾಗಿರುವ ರೂಪೇಶ್ ರಾಜಣ್ಣ ಅವರು ಮಾತನಾಡಿದ್ದು, ಈ ಬಾರಿ ಬಿಗ್ಬಾಸ್ ಫಿನಾಲೆಯಲ್ಲಿ ಟಾಪ್ 5ನಲ್ಲಿ ಯಾರಿರ್ತಾರೆ ಅಂತಾ ಅಂದಾಜು ಮಾಡಿದ್ದಾರೆ.
ರೂಪೇಶ್ ರಾಜಣ್ಣ ಪ್ರಕಾರ ಫಿನಾಲೆಯಲ್ಲಿ ಟಾಪ್ 5ನಲ್ಲಿ ಅಶ್ವಿನಿ, ಗಿಲ್ಲ, ರಘು, ಆಟ ಬದಲಾಯಿಸಿದರೆ ಸೂರಜ್ ಇರುತ್ತಾರೆ. ಧನುಷ್ ಅಥವಾ ಕಾವ್ಯ ಅವರಿಗೆ ಟಾಪ್ 5ನಲ್ಲಿ ಇರಬಹುದು ಅಂತಾರೆ ರೂಪೇಶ್. ಇನ್ನು ಫ್ಯಾಮಿಲಿಯನ್ನು ಕರೆಸಿದ ದಿನ ಜನರ ಅಭಿಪ್ರಾಯ ಬದಲಾಗಿ. ಬೇರೆ ಯಾರಾದ್ರೂ ಅವರಿಗೆ ಇಷ್ಟವಾಗಿ, ಅವರನ್ನೇ ಫಿನಾಲೆಗೆ ಕಳುಹಿಸಬಹುದು. ಅದೆಲ್ಲ ಆಟದ ಮೇಲೆ, ಜನರ ಅಭಿಪ್ರಾಯದ ಮೇಲೆ ಡಿಪೆಂಡ್ ಆಗಿರತ್ತೆ ಅಂತಾರೆ ರೂಪೇಶ್ ರಾಜಣ್ಣ.
ಇನ್ನು ಟಾಪ್ 3ಯಲ್ಲಿ ಯಾರಿರುತ್ತಾರೆ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ರೂಪೇಶ್, ಗಿಲ್ಲಿ, ಅಶ್ವಿನಿ ಖಂಡಿತ ಇರುತ್ತಾರೆ. ಕಾವ್ಯ ಮತ್ತು ರಕ್ಷಿತಾ ಮಧ್ಯೆ ಸ್ಪರ್ಧೆ ಇರಬಹುದು ಎಂದಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




