Sandalwood: ಬಿಗ್ಬಾಸ್ನಲ್ಲಿ ಪಾಸಿಟಿವ್ ಆಗಿರುವವರು ನೆಗೆಟಿವ್ ಆಗಿ ಕಾಣುತ್ತಾರೆ. ನೆಗೆಟಿವಿ ಅಂದುಕ“ಂಡವರು ಪಾಸಿಟಿವ್ ಆಗಿ ಕಾಣುತ್ತಾರೆ. ಇದಕ್ಕೆ ನೀವು ಏನಂತೀರಿ ಅನ್ನೋ ಪ್ರಶ್ನೆಗೆ ರೂಪೇಶ್ ರಾಜಣ್ಣ ಉತ್ತರಿಸಿದ್ದಾರೆ.
ಈಗಾಗಲೇ ಬಿಗ್‌ಬಾಸ್‌ಗೆ ಹೋಗಿ ಬಂದಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಬಿಗ್‌ಬಾಸ್‌ನಲ್ಲಿ ಪಾಸಿಟಿವ್ ನೆಗೆಟಿವ್ ಬರೋದಿಲ್ಲ. ಆಚೆ ಮಾಡುವ ಜೀವನವನ್ನೇ, ನಾವು ಅಲ್ಲಿ ಮಾಡುತ್ತೇವೆ. ಆಚೆ ಎಲ್ಲೆಡೆ ಓಡಾಡಿ ಜೀವನ ಮಾಡುತ್ತೇವೆ, ಆದರೆ ಬಿಗ್‌ಬಾಸ್‌ನಲ್ಲಿ 1 ಮನೆಯಲ್ಲಿ ಕೆಲವರ ಜತೆ 100 ದಿನ ನಾವು ಬದುಕಬೇಕಾಗುತ್ತದೆ. ಅಷ್ಟೇ ವ್ಯತ್ಯಾಸ ಎಂದಿದ್ದಾರೆ ರೂಪೇಶ್ ರಾಜಣ್ಣ.
ಬಿಗ್ಬಾಸ್‌ನಲ್ಲಿ ವೈಯಕ್ತಿಕವಾಗಿ ನಾವು ಹೇಗಿರುತ್ತೇವೆ ಅನ್ನೋದು ತಿಳಿಯುತ್ತದೆ. ಅದು ನನ್ನ ಹಳೆಯ ಮನೆ. ಅಲ್ಲಿ ಹೋಗಲು ಅವಕಾಶ ಸಿಕ್ಕರೆ ಖಂಡಿತ ಹೋಗುತ್ತೇನೆ. ಅದರಲ್ಲೂ ಈ ಬಾರಿ ಕನ್ನಡದ ಥೀಮ್‌ನಲ್ಲಿ ರೆಡಿ ಮಾಡಿದ್ದಾರೆ. ಆ ಮನೆಯಲ್ಲಿ 2 ದಿನ ಇರಬೇಕು ಅನ್ನೋ ಆಸೆ ಇದೆ ಎಂದು ರೂಪೇಶ್ ತಮ್ಮ ಮನದ ಮಾತು ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




