Horoscope: ಜ್ಯೋತಿಷಿಗಳು, ಪುರೋಹಿತರು, ಅರ್ಚಕರು ಆಗಿರುವ ವೇದಬ್ರಹ್ಮ ಖ್ಯಾತಿಯ ವೆಂಕಟೇಶ್ ಶರ್ಮಾ ಗುರೂಜಿ ಅವರು 2026ರ ರಾಶಿ ಭವಿಷ್ಯ ಹೇಳಿದ್ದಾರೆ. ಹಾಗಾದ್ರೆ ಮಿಥುನ ರಾಶಿಯವರ ಫಲಾಫಲ ಹೇಗಿರುತ್ತದೆ ಅಂತಾ ತಿಳಿಯೋಣ ಬನ್ನಿ.
ಮಿಥುನ ರಾಶಿಯವರಿಗೆ ಕೆಲಸದಲ್ಲಿ, ಪದವಿಯಲ್ಲಿ ಅತ್ಯುತ್ತಮ ಸ್ಥಾನ ಸಿಗಲಿದೆ. ಶಿಕ್ಷಣದಲ್ಲಿ ಯಶಸ್ಸು ಸಿಗಲಿದೆ. ಆದರೆ ಆರೋಗ್ಯದ ವಿಷಯದಲ್ಲಿ ಮಿಥುನ ರಾಶಿಯವರು ಎಚ್ಚರಿಕೆಯಿಂದಿರಬೇಕು. ಅಲ್ಲದೇ ಚಂಚಲ ಸ್ವಭಾವ ಬಿಟಟ್ು ಧೃಡ ಸಂಕಲ್ಪಂದಿದಿರಬೇಕು. ಲಕ್ಷ್ಮೀ ನಾರಾಯಣ ದೇವರ ಆರಾಧನೆ ಮಾಡಬೇಕು.
ಪ್ರತಿದಿನ ಬೆಳಿಗ್ಗೆ ಓಂ ನಮೋ ಶ್ರೀ ಲಕ್ಷ್ಮೀ ನಾರಾಯಣಾಯ ಅನ್ನೋ ಪ್ರಾರ್ಥನೆ ಮಾಡಬೇಕು. ಇದರಿಂದ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಜತೆಗೆ ಗಣಪತಿ ಆರಾಧನೆ ತಪ್ಪದೇ ಮಾಡಬೇಕು. ಪ್ರತಿದಿನ ನಿಮ್ಮ ದೇವರ ಕೋಣೆಯಲ್ಲಿರುವ ಗಣಪನಿಗೆ 21 ಗರಿಕೆ ಹಾಕಿ, ಪ್ರಾರ್ಥಿಸಬೇಕು. ಬುಧವಾರ ಅಗತ್ಯ ಇರುವವರಿಗೆ ಹಣ್ಣು ದಾನ ಮಾಡಿದರೆ ಉತ್ತಮ.
ಮಿಥುನ ರಾಶಿಯವರ ಲಕ್ಕಿ ನಂಬರ್ 5 ಮತ್ತು 7. ಲಕ್ಕ ಕಲರ್ ಹಳದಿ. ಶುಭದಿನ ಬುಧವಾರ.




