Money Tips: ಈ 10 ಕಾರಣಗಳಿಂದಾಗಿ ಬಡವರು ಶ್ರೀಮಂತರಾಗಲು ಸಾಧ್ಯವಿಲ್ಲ: ಭಾಗ 1

Web Story: ಶ್ರೀಮಂತರಾಗೋಕ್ಕೆ ಮತ್ತು ಶ್ರೀಮಂತರಂತೆ ಕಾಣೋ ಮಧ್ಯೆ ತುಂಬಾ ವ್ಯತ್ಯಾಸವಿದೆ. ಶ್ರೀಮಂತರ ಹಾಗೆ ಇರಬೇಕು, ಅವರಂತೆ ಕಾಣಬೇಕು ಅಂತಾ ಬಯಸುವವನು ಶ್ರೀಮಂತನಾಗೋಕ್ಕೆ ಸಾಧ್ಯವಿಲ್ಲ. ಶ್ರೀಮಂತನಾಗಬೇಕು ಅಂದ್ರೆ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಆ ತಪ್ಪುಗಳು ಯಾವ್ದು ಅಂತಾ ತಿಳಿಯೋಣ ಬನ್ನಿ..

  1. ಇಎಂಐ ಬಳಸಿ ಫೋನ್ ಖರೀದಿಸೋದು: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಶೋಕಿಗಾಗಿ ಇಎಂಐ ಬಳಸಿ ಐಫೋನ್ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂಥ ಶೋಕಿ ಮಾಡಿದ್ರೆ, ನೀವು ಉಳಿತಾಯ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಅವಶ್ಯಕತೆ ಇರುವ ವಸ್ತುಗಳನ್ನು ಮಾತ್ರ ಖರೀದಿಸಿ. ಪ್ರತಿನಿತ್ಯ ಕೆಲವು ಮುಖ್ಯವಾದ ಕೆಲಸಕ್ಕಾಗಿ ಫೋನ್ ಬಳಕೆ ಮಾಡಬೇಕಾಗುತ್ತದೆ. ಹಾಾಗಾಗಿ ಕಡಿಮೆ ಖರ್ಚಿನಲ್ಲೇ ನೀವು ಫೋನ್ ಖರೀದಿ ಮಾಡಬಹುದು. ಐಫೋನ್‌ಗಾಗಿ ಇಎಂಐ ಮಾಡುವುದು ಮೂರ್ಖತನ.
  2. ಕ್ರೆಡಿಟ್ ಕಾರ್ಡ್ ಬಳಸಿ ಫಾರಿನ್ ಪ್ರವಾಸ ಮಾಡೋದು: ಪ್ರವಾಸ ಮಾಡೋದು, ಚೆಂದದ ಅನುಭವ ಪಡೆಯೋದು ತಪ್ಪಲ್ಲ. ಆದರೆ ಕ್ರೆಡಿಟ್ ಕಾರ್ಡ್ ಬಳಸಿ ಪ್ರವಾಸ ಮಾಡಿದ್ರೆ, ಮುಂದೆ ತುಂಬ ಸಮಸ್ಯೆ ಎದುರಿಸಬೇಕಾಗುತ್ತದೆ. ಸೋಶಿಯಲ್‌ ಮೀಡಿಯಾದಲ್ಲಿ ಬರುವ ಲೈಕ್ಸ್‌ಗಾಗಿ ನೀವು ಕ್ರೆಡಿಟ್ ಕಾರ್ಡ್ ಬಳಸಿ, ಹಣ ಖರ್ಚು ಮಾಡಿ ಪ್ರವಾಸ ಮಾಡಿದ್ರೆ, ನೀವು ಸಾಲಗಾರರಾಗುತ್ತೀರಿ ವಿನಃ ಶ್ರೀಮಂತರಾಗುವುದಿಲ್ಲ. ಹಾಗಾಗಿ ಅವಶ್ಯಕ ಖರ್ಚು, ಉಳಿತಾಯ, ಹೂಡಿಕೆ ಎಲ್ಲ ಆದ ಬಳಿಕ ಉಳಿಯುವ ಹಣದಲ್ಲಿ ನೀವು ಪ್ರವಾಸ ಮಾಡಬೇಕು.
  3. ಹೆಚ್ಚು ದುಡ್ಡು ಖರ್ಚು ಮಾಡಿ ಮದುವೆ ಮಾಡಿಸೋದು: ಬೇರೆಯವರು ನಮ್ಮನ್ನು ನೋಡಿ ಉರ್ಕೋಳ್ಬೇಕು ಅಥವಾ ಹೊಗಳಬೇಕು ಎಂದು ನೀವು ಜೀವನಪೂರ್ತಿ ಕೂಡಿರಿಸಿದ ಹಣ ಸುರಿದು ಮದುವೆ ಮಾಡಿಸಿದ್ರೆ, ನಿಮ್ಮ ಉಳಿತಾಯ ಹಾಳಾಗುತ್ತದೆ ವಿನಃ ಇದರಿಂದ ಯಾರಿಗೂ ವ್ಯತ್ಯಾಸವಾಗುವುದಿಲ್ಲ. ಮದುವೆ ಸಿಂಪಲ್ ಆಗಿದ್ದರೆ ಉತ್ತಮವಾಗಿರುತ್ತದೆ. ಹೀಗಾಗಿಯೇ ಮಧ್ಯಮ ವರ್ಗದವರು ಇನ್ನೂ ಮಧ್ಯಮ ವರ್ಗದವರಾಗಿ ಉಳಿದಿರೋದು.
  4. ಶೋ ಆಫ್‌ಗಾಗಿ ಬ್ರ್ಯಾಂಡೆಡ್ ವಸ್ತು ಬಳಸೋದು: ಶೋಕಿ ಮಾಡಲು, ಯಾರೋ ಖರೀದಿಸಿದ್ದಾರೆಂದು ತಾನೂ ಬ್ರ್ಯಾಾಂಡೆಡ್ ವಸ್ತುಗಳನ್ನು ಖರೀದಿಸೋದು ಮೂರ್ಖತನವೇ ಸರಿ. ಆ ವಸ್ತುವನ್ನು ನೀವು 4 ದಿನ ಬಳಸಬಹುದು. ಆಮೇಲೆ ಅದು ಮೂಲೆ ಗುಂಪಾಗುತ್ತದೆ. ಅದಾಗಲೇ 2 ಜೋಡಿ ಶೂಸ್ ಇದ್ದರೂ, ಮತ್ತೆ ಬೇರೆ ಬ್ರ್ಯಾಂಡೆಡ್ ಶೂಸ್ ಖರೀದಿಸುವುದು. ಅಥವಾ ಇನ್ಯಾವುದೋ ಉಪಯೋಗಕ್ಕೆ ಬಾರದ ವಸ್ತುಗಳನ್ನು ಖರೀದಿಸಬೇಡಿ. ಸ್ಯಾಲರಿ ಹೆಚ್ಚಾದಾಗ, ಅಥವಾ ದುಡ್ಡು ಬಂದಾಗ ನೀವು ಆ ದುಡ್ಡನ್ನು ಹೂಡಿಕೆ ಮಾಡಿ. ಆರೋಗ್ಯಕರ ಆಹಾರ ಸೇವಿಸಿ, ಉತ್ತಮ ಕ್ವಾಲಿಟಿ ಉಡುಪು ಧರಿಸಿ. ಬ್ರ್ಯಾಂಡ್‌ ಕಿಂತ ಕ್ವಾಲಿಟಿ ಮುಖ್ಯ.
  5. ಸಿಕ್ಕ ಸಿಕ್ಕ ಸಬ್‌ಸ್ಕ್ರಿಪ್ಶನ್ ಬಳಸೋದು: ಯಾವುದೋ ಸಿನಿಮಾ ನೋಡಬೇಕು ಎಂದು ಸಿಕ್ಕ ಸಿಕ್ಕ ಆ್ಯಪ್‌ಗೆ ಸಾವಿರ ಸಾವಿರ ನೀಡಿ, ಸಬ್‌ಸ್ಕ್ರಿಪ್ಶನ್ ತೆಗೆದುಕ“ಳ್ಳುವುದು ಶ್ರೀಮಂತರ ಲಕ್ಷಣವಲ್ಲ. ಏಕೆಂದರೆ, ಶ್ರೀಮಂತನಾಗಬಯಸುವವನಿಗೆ ಇದೆಲ್ಲ ಮಾಡಲು ಸಮಯವೇ ಇರುವುದಿಲ್ಲ. ಇದಕ್ಕೆಲ್ಲ ಹಣ ಹಾಕುವ ಬದಲು, ಯಾವುದಾದರೂ ವಿದ್ಯೆ ಕಲಿಯಲು ಹಣ ಹೂಡಿಕೆ ಮಾಡಿ. ಇದರಿಂದ ಭವಿಷ್ಯದಲ್ಲಿ ನೀವು ಸಂಪಾದನೆ ಮಾಡಬಹುದು.  ಮುಂದಿನ 5 ವಿಷಯಗಳನ್ನು 2ನೇ ಭಾಗದಲ್ಲಿ ತಿಳಿಯೋಣ.

About The Author