Sandalwood: ಇಂದು ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಡೆವಿಲ್ ರಿಲೀಸ್ ಆಗಿದ್ದು, ದರ್ಶನ್ ಆಪ್ತ ಆಗಿರುವ ಇಂಡುವಾಳು ಸಚ್ಚಿದಾನಂದ್ ಅವರು ಕರ್ನಾಟಕ ಟಿವಿ ಮೂಲಕ ವಿಶಸ್ ತಿಳಿಸಿದ್ದಾರೆ.
ದರ್ಶನ್ ಅಣ್ಣನ ಡೆವಿಲ್ ಸಿನಿಮಾ ಬಿಡುಗಡೆ ಆಗ್ತಿದೆ. ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡ್ತಿದ್ದಾರೆ. ಚಿತ್ರ ಶತದಿನೋತ್ಸವ ಆಚರಿಸಲಿ ಅವರು ಮಾಡಿರೊ ಎಲ್ಲಾ ಸಿನಿಮಾಗಳ ದಾಖಲೆ ಮೀರಿಸುವಂತಹ ಸಿನಿಮಾ ಇದಾಗಲಿ. ದರ್ಶನ್ ಅಣ್ಙನ ಕಹಿ ನೆನಪು ಮಾಸಲಿ. ಸಹಿನೆನಪುಗಳಾಗಲಿ.
ಅವರ ಕಹಿ ಅಧ್ಯಾಯ ಮುಗಿದು ಸಿಹಿ ಅಧ್ಯಾಯ ಆರಂಭವಾಗಲಿ. ಅಭಿಮಾನಿಗಳು ಸಹ ಅದನ್ನೇ ಕಾತರದಿಂದ ಕಾಯ್ತಿದ್ದಾರೆ. ಎರಡು ಮೂರು ದಿನಗಳ ಟಿಕೆಟ್ ಗಳು ಈಗಾಗಲೇ ಬುಕ್ ಆಗಿವೆ ಎಂದಿರುವ ಸಚ್ಚಿದಾನಂದ್,
ಸಿನಿಮಾವನ್ನ ಥಿಯೇಟರ್ ಗೆ ಹೋಗಿ ನೋಡುವಂತೆ ಮನವಿ ಮಾಡಿದ್ದಾರೆ.




