National News: ಕಾರಿನಲ್ಲಿ ಕುಳಿತರೂ ತಪ್ಪಿಲ್ಲ ಹೆಲ್ಮೆಟ್ ಕಾಟ: ದಂಡ ಹಾಕುವವರ ಬಗ್ಗೆ ವ್ಯಕ್ತಿ ಬೇಸರ

National News: ನೀವು-ನಾವು ಕಾರ್‌ಲ್ಲಿ ಹೋಗುವಾಗ ಯಾರಾದ್ರೂ ಯಾಕೆ ಹೆಲ್ಮೆಟ್ ಹಾಕಿಲ್ಲ ಅಂತಾ ತಡೆದು ನಿಲ್ಲಿಸಿದರೆ ನಿಮಗೆ ಕೋಪ ಬರತ್ತಾ- ಇಲ್ವಾ..? ಅಚಾನಕ್ ಆಗಿ ನಿಮ್ಮ ಚಲನ್ ಕಟ್ ಆಗಿ, ನೀವು ಕಾರ್‌ನಲ್ಲಿ ಚಲಿಸುವಾಗ ಹೆಲ್ಮೆಟ್ ಹಾಕದ ಕಾರಣ ಚಲನ್ ಕಟ್ ಮಾಡಲಾಗಿದೆ ಅಂದ್ರೆ ನಿಮಗೆ ಹೇಗನ್ನಿಸುತ್ತೆ..?

ಇದೇ ರೀತಿಯ ಘಟನೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾರ್‌ನಲ್ಲಿ ಚಲಿಸುತ್ತಿದ್ದ ಶಿಕ್ಷಕನೋರ್ವ ಹೆಲ್ಮೆಟ್ ಧರಿಸಿ, ಕುಳಿತಿದ್ದ. ಆತನ ಬಳಿ ಹೋದ ವ್ಯಕ್ತಿಯೋರ್ವ, ನೀವ್ಯಾಕೆ ಕಾರ್‌ನಲ್ಲಿ ಹೆಲ್ಮೆಟ್ ಹಾಕಿ ಕುಳಿತಿದ್ದೀರಿ ಎಂದು ಕೇಳಿದ್ದಾನೆ.

ಇದಕ್ಕೆ ಉತ್ತರಿಸಿದ ವ್ಯಕ್ತಿ, ಕಾರಿನಲ್ಲಿ ಚಲಿಸುವಾಗ ನಾನು ಹೆಲ್ಮೆಟ್ ಹಾಕಿಲ್ಲವೆಂದು ದಂಡ ವಿಧಿಸಿದ್ದರು. ಹಾಗಾಗಿ ಈಗ ನಾನು ಕಾರಿನಲ್ಲೂ ಹೆಲ್ಮೆಟ್ ಧರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಆಗ್ರಾದ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಇವರ ಹೆಸರು ಗುಲ್ಶನ್. ಗುಲ್ಶನ್ ಪರಿಸ್ಥಿತಿ ಕಂಡು ನೆಟ್ಟಿಗರು ಅಯ್ಯೋ ಪಾಪ ಎಂದಿದ್ದಾರೆ.

About The Author