Sandalwood: ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು ಖ್ಯಾತಿಯ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಅವರು, ಈ ವಿಷಯದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ.
ರಘು ರಾಮಪ್ಪ ಅವರು ರಿಯಾಲಿಟಿ ಶೋ ಸ್ಪರ್ಧಿ, ನಟ, ಬಾಡಿ ಬಿಲ್ಡರ್ ಆಗಿರುವುದರ ಜತೆಗೆ ವ್ಯಂಗ್ಯ ಚಿತ್ರಕಾರ ಕೂಡ ಹೌದು. ಚಿಕ್ಕ ವಯಸ್ಸಿನಿಂದಲೂ ರಘು ಅವರಿಗೆ ಚಿತ್ರ ಬಿಡಿಸೋದು ಅಂದ್ರೆ ತುಂಬಾ ಇಷ್ಟದ ವಿಷಯ. ಹೆಚ್ಚು ಆಸಕ್ತಿ. ಪ್ರತೀ ವರ್ಷ ಚಿತ್ರಕಲಾ ಪರಿಷತ್ನಲ್ಲಿ ಚಿತ್ರಸಂತೆ ನಡೆಯುತ್ತದೆ. ಆ ಚಿತ್ರಸಂತೆಗೆ ರಘು ಅವರು ಎಂದಿಗೂ ಮಿಸ್ ಮಾಡದೇ ಹೋಗಿದ್ದಾರಂತೆ.
ಶಾಲಾ ದಿನಗಳಲ್ಲೇ ರಘು ಪ್ರಜಾವಾಣಿ, ಮಯೂರ, ಸುಧಾ ಅಂಥ ಪ್ರಸಿದ್ಧ ಪತ್ರಿಕೆಗೆ ವ್ಯಂಗ್ಯ ಚಿತ್ರಗಳನ್ನು ಬರೆಯುತ್ತಿದ್ದರು. ಅಲ್ಲದೇ, ಪ್ರಸಿದ್ಧ ವ್ಯಂಗ್ಯ ಚಿತ್ರಕಾರರಾಗಿರುವವರ ಜತೆ ನನ್ನ ಒಡನಾಟವಿತ್ತು. ನಾನು ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಕಿರಿಯ ಸದಸ್ಯನಾಗಿದ್ದೆ. ಬಿ.ವಿ.ರಾಮಮೂರ್ತಿ, ಆರ್.ಕೆ.ಲಕ್ಷ್ಮಣ್, ಹೀಗೆ ಸುಮಾರು ಮಹಾನುಭಾವರನ್ನು ನಾನು ಭೇಟಿಯಾಗಿದ್ದೇನೆ. ಎಂದಿದ್ದಾರೆ ರಘು ರಾಮಪ್ಪ. ಬಾಡಿ ಬಿಲ್ಡಿಂಗ್ ಬಗ್ಗೆಯೂ ರಘು ವಿವರಣೆ ನೀಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




