Political News: ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಬಗ್ಗೆ ಚರ್ಚೆ ಜೋರಾಗಿ ನಡೆದಿದ್ದು, ಇನ್ನು ಕೆಲ ದಿನಗಳಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಅದರಂತೆ ಜ್ಯೋತಿಷಿಗಳು ಡಿಕೆಶಿ ಸಿಎಂ ಆಗ್ತಾರಾ ಇಲ್ವಾ ಅನ್ನೋದರ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ.
ವೇದಬ್ರಹ್ಮ ಶ್ರೀ,ಕೆ.ವೆಂಕಟೇಶ್ ಶರ್ಮಾ ಎಂಬ ಜ್ಯೋತಿಷಿಗಳು ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದು ಮುಂದಿನ ವರ್ಷ ಜೂನ್-ಜುಲೈ ವೇಳೆಗೆ ಡಿಕೆಶಿ ಸಿಎಂ ಆಗಲಿದ್ದಾರೆಂದು ಹೇಳಿದ್ದಾರೆ.
ಡಿಸಿಎಂ ಸ್ಥಾನದಲ್ಲಿರು ಡಿಕೆಶಿಗೆ ಧನಸ್ಥಾನದಲ್ಲಿ ಗುರು ಇದ್ದು, ಹಣದ ರಾಶಿಯೇ ಹರಿದು ಬರಲಿದೆ. ಆದರೆ ಸಿಎಂ ಸ್ಥಾನ ಮಾತ್ರ ಸದ್ಯಕ್ಕೆ ಸಿಗುವುದು ಕಷ್ಟ ಅಂತಾರೆ ಜ್ಯೋತಿಷಿಗಳು. ಪ್ರಯತ್ನಿಸಿದೆ ಮುಂದಿನ ವರ್ಷ ಜೂನ್-ಜುಲೈ ವೇಳೆಗೆ ಡಿಕೆಶಿ ಸಿಎಂ ಆಗಬಹುದು ಎಂದು ವೆಂಕಟೇಶ್ ಶರ್ಮಾ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಏಕೆಂದರೆ ಈಗ ಡಿಕೆಶಿ ಅವರಿಗೆ ಗುರುಬಲ ಚೆನ್ನಾಗಿಲ್ಲ. 6ನೇ ಮನೆಯಲ್ಲಿ ಗುರುವಿದ್ದು, ಹಿತಶತ್ರುಗಳ ಬುದ್ಧಿಯಿಂದ ಯಾವುದೇ ಕೆಲಸ ಮಾಡಿದರೂ ಫಲ ಸಿಗುವುದು ಕಡಿಮೆ. ಆದರೆ ಮುಂದಿನ ವರ್ಷ ಈ ಯೋಗವಿದೆ. ಜೂನ್-ಜುಲೈ ವೇಳೆ ಡಿಕೆಶಿ ಸಿಎಂ ಆಗಲೇಬೇಕು. ಇಲ್ಲದಿದ್ದಲ್ಲಿ, ಇನ್ನೂ 10 ವರ್ಷಗಳ ಕಾಲ ಡಿಕೆಶಿ ಸಿಎಂ ಆಗುವ ಯೋಗ ಕಳೆದುಕ“ಳ್ಳುತ್ತಾರೆ. ಹಾಗಾಗಿ ಸಿಎಂ ಆಗಲು ಸಕಲ ಪ್ರಯತ್ನ ಮಾಡಿದ್ದಲ್ಲಿ ಮುಂದಿನ ವರ್ಷ ಡಿಕೆಶಿ ಸಿಎಂ ಆಗೋದು ಗ್ಯಾರಂಟಿ ಅಂತಾರೆ ಜ್ಯೋತಿಷಿಗಳು.




