Political News: ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಎಲ್ಲ ಪಕ್ಷದ ನಾಯಕರು ಬೆಳಗಾವಿಯಲ್ಲಿ ಬೀಡು ಬಿಟ್ಟಿದ್ದಾರೆ.
ಅಧಿವೇಶನದಲ್ಲಿ ಪರ ವಿರೋಧ ಆರೋಪ, ಪ್ರತ್ಯಾರೋಪ, ಚರ್ಚೆ ಎಲ್ಲವೂ ನಡೆಯುತ್ತಿರುವುದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬ್ರೇಕ್ ಪಡೆದು, ಕ್ರಿಕೇಟ್ ಆಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಿರುವ ಅವರು, ದೈಹಿಕ ಸದೃಢತೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ, ನಡಿಗೆ, ಕ್ರೀಡೆ, ಕಸರತ್ತು ದೈನಂದಿನ ಭಾಗವಾಗಿರುವುದು ಅಗತ್ಯ. ಬೆಳಗಾವಿಯ ಅಧಿವೇಶನದ ನಡುವೆ ಇಂದು ಬೆಳಗ್ಗೆ ನಮ್ಮ ಮಾಧ್ಯಮ ಸ್ನೇಹಿತರ ಒತ್ತಾಯಕ್ಕೆ ಮಣಿದು, ಬೆಳಗಾವಿಯ KCA ಕ್ರೀಡಾಂಗಣದಲ್ಲಿ ಶಾಸಕ ಮಿತ್ರರು, ಪಕ್ಷದ ಮುಖಂಡರು ಮತ್ತಿತರರೊಂದಿಗೆ ಕ್ರಿಕೆಟ್ ಆಡಲಾಯಿತು. ಸ್ನೇಹಪೂರ್ಣವಾಗಿ ಸ್ವಲ್ಪ ಸಮಯದ ಈ ಕ್ರೀಡಾ ಚಟುವಟಿಕೆ ಮನಸ್ಸಿಗೆ ಖುಷಿ, ಉಲ್ಲಾಸವನ್ನು ತಂದುಕೊಟ್ಟಿದೆ ಎಂದು ಬರೆದಿದ್ದಾರೆ.
ದೈಹಿಕ ಸದೃಢತೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ವ್ಯಾಯಾಮ, ನಡಿಗೆ, ಕ್ರೀಡೆ, ಕಸರತ್ತು ದೈನಂದಿನ ಭಾಗವಾಗಿರುವುದು ಅಗತ್ಯ. ಬೆಳಗಾವಿಯ ಅಧಿವೇಶನದ ನಡುವೆ ಇಂದು ಬೆಳಗ್ಗೆ ನಮ್ಮ ಮಾಧ್ಯಮ ಸ್ನೇಹಿತರ ಒತ್ತಾಯಕ್ಕೆ ಮಣಿದು, ಬೆಳಗಾವಿಯ KCA ಕ್ರೀಡಾಂಗಣದಲ್ಲಿ ಶಾಸಕ ಮಿತ್ರರು, ಪಕ್ಷದ ಮುಖಂಡರು ಮತ್ತಿತರರೊಂದಿಗೆ ಕ್ರಿಕೆಟ್ ಆಡಲಾಯಿತು.… pic.twitter.com/kIUz3kFGIH
— Vijayendra Yediyurappa (@BYVijayendra) December 12, 2025




