ಪ್ರತ್ಯೇಕ ಪ್ರಕರಣ: ಕುಡಿದ ಅಮಲಿನಲ್ಲಿ ಗೆಳೆಯನ ಹ*: ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಆತ್ಮಹ*ಗೆ ಶರಣು

Tumakuru News: ತುಮಕೂರು: ಕುಡಿದ ಅಮಲಿನಲ್ಲಿ ಸ್ನೇಹಿತರ ನಡುವೆ ನಡೆದಿದ್ದ ಜಗಳ ಹತ್ಯೆಯಲ್ಲಿ ಅಂತ್ಯವಾದ ಘಟನೆ ತುಮಕೂರು‌ ಜಿಲ್ಲೆ ಪಾವಗಡ ತಾಲ್ಲೂಕಿನ ಅಪ್ಪಾಜಿಹಳ್ಳಿ ಬಳಿ ನಡೆದಿದೆ.

ಬಿಹಾರ‌ ಮೂಲದ ಅವಿದ್ ಅಲಿ( 23) ಕೊಲೆಯಾದ ಯುವಕನಾಗಿದ್ದು, ಈತನ ಹತ್ಯೆಗೈದ ಈತನ ಗೆಳೆಯನಾಗಿರುವ ಆರೋಪಿ ಬಿಹಾರ ಮೂಲದ ಷಂಷಾದ್ ( 25)ನನ್ನು ಬಂಧಿಸಲಾಗಿದೆ. ಇವರಿಬ್ಬರು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ ಮದ್ಯಪಾನ ಮಾಡಿ, ಎಸ್ೇಟೇಟ್‌ಗೆ ಹಿಂದಿರುಗುವಾಗ ಜಗಳವಾಗಿದೆ.

ಈ ಜಗಳ ತಾರಕಕ್ಕೇರಿ, ಷಂಷಾದ್ ಅವಿದ್ ಮೇಲೆ ದಾಳಿ ಮಾಡಿ, ಹತ್ಯೆ ಮಾಡಿದ್ದಾನೆ. ಹಾಗಾಗಿ ಅವಿದ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಿರುಮಣಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Mandya News: ಮಂಡ್ಯದಲ್ಲಿ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮಂಡ್ಯದ ಗುತ್ತಲು ಬಡಾವಣೆಯಲ್ಲಿ ಘಟನೆ ನಡೆದಿದ್ದು, 45 ವರ್ಷದ ರಾಘವೇಂದ್ರ ಮೃತ ವ್ಯಕ್ತಿಯಾಗಿದ್ದಾನೆ.

ಮೊನ್ನೆಯಷ್ಟೆ ರಾಘವೇಂದ್ರ ತಂದೆ ಕೂಡ ವಯೋ ಸಹಜ ಸಾವನ್ನಪ್ಪಿದ್ದರು. ತಂದೆ ಸಾವು, ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಈತ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಪೂರ್ವ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

About The Author