ವೇದಿಕೆಯಲ್ಲೇ ಹಿಜಬ್ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್: ವೀಡಿಯೋ ವೈರಲ್

 

ಬಿಹಾರದ ಸಿಎಂ ನಿತೀಶ್ ಕುಮಾರ್ ವೇದಿಕೆಯಲ್ಲೇ ಎಡವಟ್ಟು ಮಾಡಿದ್ದು, ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿನಿಯ ಹಿಜಬ್ ತೆಗೆಯಲು ಯತ್ನಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ವಿರೋಧ ವ್ಯಕ್ತವಾಗಿದೆ.

ನೂತನವಾಗಿ ನೇಮವಾಗಿರುವ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮ ಇದ್ದು, ಈ ಕಾರ್ಯಕ್ರಮದಲ್ಲಿ ಓರ್ವ ಮುಸ್ಲಿಂ ಯುವತಿ ಹಿಜಬ್ ಧರಿಸಿ ಬಂದಿದ್ದಳು. ಪತ್ರ ಸ್ವೀಕಾರದ ವೇಳೆ ಮುಖ ತೋರಿಸು ಎಂದು ನಿತೀಶ್ ಕುಮಾರ್ ಆಕೆಯ ಹಿಜಬ್ ಎಳೆಯಲು ಪ್ರಯತ್ನಿಸಿದ್ದಾರೆ. 

ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಆರ್‌ಜೆಡಿ, ನಿತೀಶ್ ಕುಮಾರ್ ಮಾಡಿರುವ ಈ ಕೆಲಸಕ್ಕೆ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದಿದ್ದಾರೆ. ಕಾಂಗ್ರೆಸ್ ಕೂಡ ಇದನ್ನು ವಿರೋಧಿಸಿದೆ. ಕೆಲ ದಿನಗಳ ಹಿಂದೆ ನಿತೀಶ್ ಕುಮಾರ್ ರಾಷ್್ರಗೀತೆ ಹೇಳುವಾಗ, ನಗುತ್ತ ತಮಾಷೆ ಮಾಡುತ್ತಿದ್ದರು. ಆಗ ಸೋಶಿಯಲ್ ಮೀಡಿಯಾದಲ್ಲಿ ಅವರ ಮಾನಸಿಕ ಸ್ಥೀಮಿತೆ ಸರಿ ಇಲ್ಲ. ಮುಂದೆ ಇಂಥವರಿಗೆ ಸಿಎಂ ಆಗಲು ಅವಕಾಶ ನೀಡುವುದು ತಪ್ಪು ಅನ್ನೋ ಮಾತು ಕೂಡ ಕೇಳಿ ಬಂದಿತ್ತು.

About The Author